ತೆರವು ಕಾರ್ಯಾಚರಣೆಯನ್ನು ತೀವ್ರಗೊಳಿಸಿದ ಮಣಿಪುರ ಸರ್ಕಾರ

Prasthutha|

ಮಣಿಪುರ: ಮಣಿಪುರದ ತೌಬಾಲ್ ಜಿಲ್ಲೆಯ ವೈಥೌ ಸಂರಕ್ಷಿತ ಮೀಸಲು ಅರಣ್ಯದಲ್ಲಿ ನಿರ್ಮಿಸಲಾಗಿದ್ದ 69 ಮನೆಗಳನ್ನು ಮಣಿಪುರ ಸರ್ಕಾರ ಭಾನುವಾರ ನೆಲಸಮಗೊಳಿಸಿದೆ.

- Advertisement -

ತೌಬಾಲ್ ಅರಣ್ಯ ವಿಭಾಗದ ವ್ಯಾಪ್ತಿಯ ವೈಥೌ ಸಂರಕ್ಷಿತ ಮೀಸಲು ಅರಣ್ಯ ಪ್ರದೇಶದೊಳಗಿನ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಿದ್ದರಿಂದ ಸುಮಾರು 69 ಮನೆಗಳು ಸಂಪೂರ್ಣವಾಗಿ ನೆಲಸಮಗೊಂಡಿವೆ ಎಂದು ತೌಬಾಲ್ನ ಜಿಲ್ಲಾ ಅರಣ್ಯ ಅಧಿಕಾರಿ ಟಿ.ಎಚ್.ಲೋಕೆಂಡ್ರೋ ತಿಳಿಸಿದ್ದಾರೆ.

“ವೈಥೌ ಸಂರಕ್ಷಿತ ಅರಣ್ಯ ಪ್ರದೇಶ ಮತ್ತು ಇತರ ಪ್ರದೇಶಗಳಲ್ಲಿನ ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸುವ ಕಾರ್ಯವನ್ನು ಹಂತ ಹಂತವಾಗಿ ಕೈಗೊಳ್ಳಲಾಗುವುದು. 180 ಕ್ಕೂ ಹೆಚ್ಚು ಅಕ್ರಮ ಅತಿಕ್ರಮಣದಾರರು ವೈಥೌ ಅರಣ್ಯ ಪ್ರದೇಶದಲ್ಲಿ ನೆಲೆಸಿರುವುದು ಕಂಡುಬಂದಿದೆ. ಸುಮಾರು 71 ಅಕ್ರಮ ಪಟ್ಟದಾರ್ಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಮತ್ತು 69 ಕಟ್ಟಡಗಳನ್ನು ತೆರವುಗೊಳಿಸಲಾಗಿದೆ” ಎಂದು ಲೋಕೆಂಡ್ರೋ ಹೇಳಿದರು.



Join Whatsapp