ಮಣಿಪುರ: ಕಾಂಗ್ರೆಸ್ ರಾಜ್ಯಾಧ್ಯಕ್ಷರೂ ಸೇರಿ ಎಂಟು ಮಂದಿ ಶಾಸಕರು ಬಿಜೆಪಿಗೆ!

Prasthutha|

ಮುಂದುವರಿದ ಬಿಜೆಪಿಯ ಆಪರೇಷನ್ ‘ಭ್ರಷ್ಟಾಚಾರ’

- Advertisement -

ಇಂಫಾಲ್: ಮಣಿಪುರ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಸೇರಿದಂತೆ ನಾಯಕರು ರಾಜೀನಾಮೆ ನೀಡಿ ಬಿಜೆಪಿ ಸೇರುವುದರೊಂದಿಗೆ ಕಾಂಗ್ರೆಸ್ಸನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.

ಮಣಿಪುರ ಕಾಂಗ್ರೆಸ್ ರಾಜ್ಯಾಧ್ಯಕ್ಷ ಗೋವಿಂದಾಸ್ ಕೊಂಟೋಜಮ್ ಮತ್ತು ಎಂಟು ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮ ವರದಿ ಮಾಡಿದೆ.

- Advertisement -

ಕಳೆದ ಡಿಸೆಂಬರ್‌ನಲ್ಲಿ ಗೋವಿಂದಾಸ್ ಕೊಂಟೋಜಮ್ ಮಣಿಪುರ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. ಬಿಷ್ಣುಪುರ ಕ್ಷೇತ್ರದಿಂದ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಮಾಜಿ ಸಚಿವ ಗೋವಿಂದಾಸ್ ಕೊಂಟೋಜಮ್ ಅವರು ರಾಜ್ಯ ವಿಧಾನಸಭೆಯಲ್ಲಿ ಕಾಂಗ್ರೆಸ್ ನ ಮುಖ್ಯ ಸಚೇತಕರಾಗಿದ್ದರು.

ವಿಧಾನಸಭಾ ಚುನಾವಣೆಗೂ ಮನ್ನ ಕಾಂಗ್ರೆಸ್ ನಾಯಕರನ್ನು ಕರೆತರುವ ಕಾರ್ಯಾಚರಣೆಯನ್ನು ಮಣಿಪುರದಲ್ಲಿ ಬಿಜೆಪಿ ತೀವ್ರಗೊಳಿಸಿತ್ತು. ಮಣಿಪುರ ವಿಧಾನಸಭೆಯಲ್ಲಿ ಒಟ್ಟು ಸದಸ್ಯರ ಸಂಖ್ಯೆ 60. ಪ್ರಸ್ತುತ ಮಣಿಪುರದ ಆಡಳಿತಾರೂಢ ಬಿಜೆಪಿಗೆ 36 ಸದಸ್ಯರ ಬೆಂಬಲವಿದೆ. ಕೇವಲ 21 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ಪ್ರಾದೇಶಿಕ ಪಕ್ಷಗಳ ಸಹಾಯದಿಂದ ಅಧಿಕಾರ ಹಿಡಿದಿತ್ತು.

2017 ರ ಚುನಾವಣೆಯಲ್ಲಿ 28 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿತ್ತು. ರಾಜಸ್ಥಾನ, ಪಂಜಾಬ್, ಚತ್ತೀಸ್ಗಢ ಮತ್ತು ತೆಲಂಗಾಣದ ನಂತರ ಮಣಿಪುರ ಕಾಂಗ್ರೆಸ್‌ನಲ್ಲೂ ಉಂಟಾದ ಬಿಕ್ಕಟ್ಟು ರಾಷ್ಟ್ರೀಯ ನಾಯಕರಿಗೆ ದೊಡ್ಡ ತಲೆನೋವಾಗಿದೆ.

Join Whatsapp