ಪ್ರತಿಷ್ಠಿತ ಆಕ್ಸ್ ಫರ್ಡ್ ವಿವಿ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿ ಮಣಿಪಾಲದ ರಶ್ಮಿ ಸಾಮಂತ್ ಆಯ್ಕೆ

Prasthutha|

ಉಡುಪಿ : ಪ್ರತಿಷ್ಠಿತ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿ ಉಡುಪಿಯ ಮಣಿಪಾಲ ಮೂಲದ ರಶ್ಮಿ ಸಾಮಂತ್ ಆಯ್ಕೆಯಾಗಿದ್ದಾರೆ.

- Advertisement -

ಮಣಿಪಾಲ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ವ್ಯಾಸಾಂಗ ಮಾಡಿದ್ದ ರಶ್ಮಿ ಇಂಗ್ಲೆಂಡ್ ನ ಆಕ್ಸ್ ಫರ್ಡ್ ವಿವಿ ವಿದ್ಯಾರ್ಥಿ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಅಧ್ಯಕ್ಷ ಸ್ಥಾನ ಪಡೆದು ಮೊದಲ ಭಾರತೀಯ ಮಹಿಳೆ ಎಂದು ಗುರುತಿಸಿದ್ದಾರೆ.

ಮಣಿಪಾಲದ ವತ್ಸಲಾ ಸಾಮಂತ್ ಮತ್ತು ದಿನೇಶ್ ಸಾಮಂತ್ ದಂಪತಿಯ ಪುತ್ರಿಯಾದ ರಶ್ಮಿ ಸಾಮಂತ್, ಮಣಿಪಾಲ ಹಾಗೂ ಉಡುಪಿಯಲ್ಲಿ ಆರಂಭಿಕ ಶಿಕ್ಷಣ ಪಡೆದಿದ್ದರು. ಎಂಐಟಿಯಲ್ಲಿ 2016ರಿಂದ 2020ರ ವರೆಗೆ ಮೆಕ್ಯಾನಿಕಲ್ ಎಂಜಿನಿಯರಿಂಗ್ ವ್ಯಾಸಾಂಗ ಮಾಡಿದ್ದರು.

- Advertisement -

ಪ್ರಸ್ತುತ ಆಕ್ಸ್ ಫರ್ಡ್ ವಿವಿಯ ಲಿನಾಕ್ರೆ ಕಾಲೇಜಿನಲ್ಲಿ ಎನರ್ಜಿ ಸಿಸ್ಟಮ್ಸ್ ವಿಷಯದಲ್ಲಿ ಎಂಎಸ್ಸಿ ವ್ಯಾಸಾಂಗ ಮಾಡುತ್ತಿರುವ ರಶ್ಮಿ, ಕೊರೊನ ಸೋಂಕಿನ ವಿರುದ್ಧ ಸುರಕ್ಷತೆ, ಮಾನಸಿಕ ಆರೋಗ್ಯ, ಪರಿಸರ ಸ್ನೇಹಿ ಕಾಲೇಜು ಕ್ಯಾಂಪಸ್ ನಿರ್ಮಾಣದ ಭರವಸೆಯನ್ನು ಮುಂದಿಟ್ಟುಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.

Join Whatsapp