ತ್ರಿಪುರಾ ಮುಖ್ಯಮಂತ್ರಿಯಾಗಿ ಎರಡನೇ ಬಾರಿಗೆ ಮಾಣಿಕ್ ಸಹಾ ಅಧಿಕಾರ ಸ್ವೀಕಾರ

Prasthutha|

ಅಗರ್ತಲಾ: ತ್ರಿಪುರಾ ಮುಖ್ಯಮಂತ್ರಿಯಾಗಿ ಮಾಣಿಕ್ ಸಹಾ ಅವರು ಬುಧವಾರ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

- Advertisement -


ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತಿತರ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಚುನಾವಣೆಗೆ ವರ್ಷ ಇರುವಾಗ ಮಾಣಿಕ್ ಅವರನ್ನು ಮುಖ್ಯಮಂತ್ರಿ ‌ಮಾಡಲಾಗಿತ್ತು.‌ ಆದರೆ ‌ಬಿಜೆಪಿ‌ ಸಾಕಷ್ಟು ಸ್ಥಾನ ಕಳೆದುಕೊಂಡಿತ್ತು. ಆದರೂ‌ ಬಿಜೆಪಿ ಮೈತ್ರಿ ಕೂಟವು‌ 60ರಲ್ಲಿ 32 ಸ್ಥಾನ ಗೆದ್ದಿದ್ದರಿಂದ ಸರಕಾರ ರಚಿಸಲು ತೊಂದರೆ ಇರಲಿಲ್ಲ.

- Advertisement -

ಪ್ರಮಾಣವಚನ ಸ್ವೀಕಾರ ಸಮಾರಂಭವನ್ನು ಸಿಪಿಎಂ, ಕಾಂಗ್ರೆಸ್ ಬಹಿಷ್ಕರಿಸಿದ್ದವು. ತಿಪ್ಸ ಬುಡಕಟ್ಟು ಪಕ್ಷವು 13 ಸ್ಥಾನ ಗೆದ್ದು ಎರಡನೆಯ ಅತಿ ದೊಡ್ಡ ಪಕ್ಷವೆನಿಸಿದೆ.

Join Whatsapp