ಮಂಗಳೂರು : ಕೋವಿಡ್ ಮಾರ್ಗಸೂಚಿ ಉಲ್ಲಂಘನೆ | ಹಲವು ವಾಹನಗಳ ಮುಟ್ಟುಗೋಲು

Prasthutha|

ಮಂಗಳೂರು : ಕೊರೊನಾ ಮಾರ್ಗಸೂಚಿ ಉಲ್ಲಂಘಿಸಿದ ಕಾರಣ ದ.ಕ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮೇ 2ರ ರವಿವಾರದಂದು ಹಲವು ವಾಹನಗಳನ್ನು ಪೊಲೀಸರು ಮುಟ್ಟುಗೋಲು ಹಾಕಿದ್ದಾರೆ.

- Advertisement -

ದ.ಕ ಜಿಲ್ಲೆಯಲ್ಲಿ 5 ಎಫ್‌ಐಆರ್‌‌‌ ದಾಖಲಾಗಿದ್ದರೆ, ಮಾಸ್ಕ್‌ ಧರಿಸದ 266 ಮಂದಿಯ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೇ, ಕರ್ಫ್ಯೂ ಉಲ್ಲಂಘಿಸಿದ 17 ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ನಗರದ ಪೊಲೀಸ್‌ ಕಮೀಷನರೇಟ್‌‌‌‌ ವ್ಯಾಪ್ತಿಯಲ್ಲಿ ರವಿವಾರ 66 ದ್ವಿಚಕ್ರ ವಾಹನ ಹಾಗೂ  ನಾಲ್ಕು ಚಕ್ರದ 4 ವಾಹನಗಳನ್ನು ಜಪ್ತಿ ಮಾಡಲಾಗಿದ್ದು, ಸಾಂಕ್ರಾಮಿಕ ರೋಗ ತಡೆ ಕಾಯ್ದೆಯಡಿ 12 ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇನ್ನು ಮಾಸ್ಕ್‌ ಧರಿಸದ 410 ಮಂದಿಯ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ರಾಷ್ಟ್ರೀಯ ವಿಪತ್ತು ಕಾಯ್ದೆಯಡಿ 15 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.

- Advertisement -

ಉಡುಪಿಯಲ್ಲಿ, ಲಾಕ್‌‌ಡೌನ್‌ ನಿಯಮ ಉಲ್ಲಂಘಿಸಿದ ಕಾರಣ 37 ವಾಹನಗಳನ್ನು ಮುಟ್ಟುಗೋಲು ಹಾಕಲಾಗಿದೆ. 6 ದ್ವಿಚಕ್ರ ವಾಹನ ಹಾಗೂ 3 ನಾಲ್ಕು ಚಕ್ರದ ವಾಹನ, 6 ಕೊರೊನಾ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ.

Join Whatsapp