ಮಂಗಳೂರು: ಪೊಲೀಸರ ಗುಂಡೇಟಿಗೆ ಬಲಿಯಾದವರನ್ನು ಸ್ಮರಿಸಿದ ಸಾರ್ವಜನಿಕರು

Prasthutha|

ಮಂಗಳೂರು: ಮಂಗಳೂರಿನಲ್ಲಿ ನಡೆದ ಗೋಲಿಬಾರ್ ಘಟನೆಗೆ ಇಂದು ಎರಡು ವರ್ಷಗಳು ತುಂಬಿದ್ದು, ಈ ಪ್ರಯುಕ್ತ ಪೊಲೀಸರ ಗುಂಡೇಟಿಗೆ ಬಲಿಯಾದವರನ್ನು ಸ್ಮರಿಸುವ ಕಾರ್ಯಕ್ರಮವನ್ನು ಮಂಗಳೂರಿನ ಸಮಾನ ಮನಸ್ಕರು ಇಂದು ಬಂದರ್’ನ ಅಝ್ಹರಿಯಾ ಮದ್ರಸದ ಸಮೀಪ ಆಯೋಜಿಸಿದ್ದರು. 

- Advertisement -

ಈ ವೇಳೆ ಮೊಂಬತ್ತಿ ಬೆಳಗಿಸಿ ಮೃತರಿಗೆ ಗೌರವ ಅರ್ಪಿಸಲಾಯಿತು. ಕಾರ್ಯಕ್ರಮದಲ್ಲಿ ಮಕ್ಕಳು, ಮಹಿಳೆಯರು ಸಹಿತ ಸಾರ್ವಜನಿಕರು ಭಾಗವಹಿಸಿದ್ದರು. CAA ಕಾಯ್ದೆ ಮತ್ತು ಅಮಾಯಕರನ್ನು ಹತ್ಯೆಗೈದ ಪೊಲೀಸರ ವಿರುದ್ಧ ಸಾರ್ವಜನಿಕರು ಘೋಷಣೆಗಳನ್ನು ಕೂಗಿದರು.

ಕೇಂದ್ರ ಸರಕಾರ ಜಾರಿಗೆ ತಂದಿದ್ದ ಸಿಎಎ/ಎನ್.ಆರ್.ಸಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ಡಿ.19, 2019ರಂದು ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯ ವೇಳೆ ಪೊಲೀಸರ ಗುಂಡೇಟಿಗೆ ಜಲೀಲ್ ಮತ್ತು ನೌಶೀನ್ ಎಂಬ  ಇಬ್ಬರು ಯುವಕರು ಬಲಿಯಾಗಿದ್ದರು. ಅದರೊಂದಿಗೆ ಹಲವಾರು ಮಂದಿ ಗಂಭೀರ ಗಾಯಗೊಂಡಿದ್ದರು.



Join Whatsapp