‘ಜಾಮಿಯಾ ಮಿಲ್ಲಿಯಾ’ ಎಲ್ ಎಲ್ ಎಂ ಪ್ರವೇಶ ಪರೀಕ್ಷೆ: 7ನೇ ರ್‍ಯಾಂಕ್ ಪಡೆದ ಮಂಗಳೂರಿನ ನಿಹಾಲ್

Prasthutha|

ಮಂಗಳೂರು: ದೆಹಲಿಯ ಪ್ರತಿಷ್ಠಿತ ಜಾಮಿಯಾ ಮಿಲ್ಲೀಯಾ ಇಸ್ಲಾಮಿಯಾ(ಜೆಎಂಐ) ಕೇಂದ್ರೀಯ ವಿಶ್ವವಿದ್ಯಾಲಯ ನಡೆಸಿದ ಎಲ್ಎಲ್ಎಂ ಸ್ನಾತಕೋತ್ತರ ಪದವಿಯ ಪ್ರವೇಶ ಪರೀಕ್ಷೆಯಲ್ಲಿ ಮಂಗಳೂರಿನ ನಿಹಾಲ್ ಮುಹಮ್ಮದ್ ರಾಷ್ಟ್ರಮಟ್ಟದಲ್ಲಿ ಏಳನೇ ರ್‍ಯಾಂಕ್ ಪಡೆದಿದ್ದು, ಸರಕಾರಿ ಕೋಟಾದ ಸೀಟ್‌ಗೆ ಆಯ್ಕೆಯಾಗಿದ್ದಾರೆ.

- Advertisement -

ನಗರದ ಕುದ್ರೋಳಿಯ ಅಬ್ದುಲ್ ನಿಝಾರ್ ಹಾಗು ಖಾಲಿಸ ನಿಝಾರ್ ದಂಪತಿಗಳ ಸುಪುತ್ರ ನಿಹಾಲ್ ಮುಹಮ್ಮದ್ ನಗರದ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪಿಯು ಬಳಿಕ ಆಲಿಗಡ್ ಮುಸ್ಲಿಂ ವಿಶ್ವವಿದ್ಯಾಲಯದಿಂದ ಎಲ್ ಎಲ್ ಬಿ ಪದವಿ ಪಡೆದಿದ್ದಾರೆ. ಎಸ್ ಐ ಒ ವಿದ್ಯಾರ್ಥಿ ಸಂಘಟನೆಯ ಸದಸ್ಯರು, ಸ್ಥಾನೀಯ ಹಾಗೂ ಜಿಲ್ಲಾ ಮಟ್ಟದ ಹೊಣೆಗಾರಿಕೆಗಳನ್ನು ನಿರ್ವಹಿಸಿದ್ದಾರೆ.

Join Whatsapp