ಮಂಗಳೂರಿನಲ್ಲಿ ನಾಳೆ ನೀರು ಪೂರೈಕೆ ಸ್ಥಗಿತ!

Prasthutha|

ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪೈಪ್ ಲೈನ್ ಕಾಮಗಾರಿ ನಡೆಯುವುದರಿಂದ ಮಂಗಳೂರು ನಗರದ ವಿವಿಧೆಡೆ ಭಾನುವಾರ (ಜುಲೈ 17) ಮುಂಜಾನೆಯಿಂದ 24 ಗಂಟೆಗಳ ಕಾಲ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

- Advertisement -


ತುಂಬೆ ಡ್ಯಾಂನಿಂದ ಸರಬರಾಜು ಮಾಡುವ ಮುಖ್ಯ ಕೊಳವೆ ಕೂಳೂರು ಬಳಿಯ ಕೊಟ್ಟಾರ ಚೌಕಿ ಸೂಪರ್ ಸ್ಟೀಲ್ ಬಳಿ ಸೋರಿಕೆ ಉಂಟಾಗಿರುವ ಹಿನ್ನೆಲೆ ತುರ್ತಾಗಿ ಕಾಮಗಾರಿಗೆ ಪಾಲಿಕೆಯು ಮುಂದಾಗಿದೆ.


ಸುರತ್ಕಲ್, ಕಾನ, ಕಾಟಿಪಳ್ಳ, ಕೂಳೂರು, ಜಲ್ಲಿಗುಡ್ಡೆ, ಕೋಡಿಕಲ್, ಬಾಳ, ಕುಳಾಯಿ, ಮುಕ್ಕ, ಪಣಂಬೂರು ಮುಂತಾದೆಡೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

Join Whatsapp