ಮಂಗಳೂರು: ಹಿರಿಯ ಕಾರ್ಮಿಕ ನಾಯಕ ಗಿರಿಯಪ್ಪ ನಿಧನ

Prasthutha|

ಮಂಗಳೂರು: ಹಿರಿಯ ಕಾರ್ಮಿಕ ನಾಯಕ, CPIM ಸದಸ್ಯ ಕಾಂ.ಗಿರಿಯಪ್ಪ ಅಸೌಖ್ಯದಿಂದಾಗಿ ಇಂದು ನಿಧನರಾಗಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು. ಮುಂಜಾನೆ ಉಳ್ಳಾಲ ಕೋಡಿಯಲ್ಲಿರುವ ಸ್ವಗ್ರಹದಲ್ಲಿ ಅವರು ಕೊನೆಯುಸಿರು ಎಳೆದಿದ್ದಾರೆ.

- Advertisement -

ಎಳೆಯ ಪ್ರಾಯದಲ್ಲೇ ಎಡಪಂಥೀಯ ವಿಚಾರಧಾರೆಗೆ ಆಕರ್ಷಿತರಾದ ಕಾಂ.ಗಿರಿಯಪ್ಪರವರು ಹಂಚು ಕಾರ್ಖಾನೆಯಲ್ಲಿ ದುಡಿಯುವ ಮೂಲಕ ಕಾರ್ಮಿಕರಾಗಿದ್ದರು. ಬಳಿಕ ಹಂಚು ಕಾರ್ಮಿಕರ ನಾಯಕರಾಗಿ ಹೊರ ಹೊಮ್ಮಿದರು.ಇತರ ಜನವಿಭಾಗದ ಹೋರಾಟಗಳಲ್ಲಿ ಭಾಗವಹಿಸುವ ಮೂಲಕ ಕಮ್ಯುನಿಸ್ಟ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಬೆಳೆದರು.

ತನ್ನ ಯೌವನಾವಸ್ಥೆಯಲ್ಲಿ ಹಂಚು ಕಾರ್ಮಿಕರ ಸಮರಧೀರ ಹೋರಾಟವೊಂದರಲ್ಲಿ ಭಾಗವಹಿಸಿದ್ದನ್ನು ನೆಪವೊಡ್ಡಿ ಕಾರ್ಖಾನೆಯ ಮಾಲಕರು ಕಾಂ.ಗಿರಿಯಪ್ಪರವರನ್ನು ಕೆಲಸದಿಂದ ವಜಾಗೊಳಿಸಿದರು. ಆಗ ಹಂಚು ಕಾರ್ಮಿಕರ ಸಂಘಟನೆಯ ಹಾಗೂ ಪಕ್ಷದ ಜಿಲ್ಲಾ ನಾಯಕತ್ವ ಕಾಂ.ಗಿರಿಯಪ್ಪರವರನ್ನು ಬೋಳಾರದಲ್ಲಿರುವ ಹಂಚು ಕಾರ್ಮಿಕರ ಸಂಘದ ಕಚೇರಿಯಲ್ಲಿ ಕಚೇರಿ ಕಾರ್ಯದರ್ಶಿಯನ್ನಾಗಿ ನೇಮಿಸಿದರು.

- Advertisement -

ಅಂದಿನಿಂದ 35 ವರ್ಷಗಳಿಗೂ ಮಿಕ್ಕಿ ಬೋಳಾರದ ಕಚೇರಿಯಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿದ ಕಾಂ.ಗಿರಿಯಪ್ಪರವರು ಕಳೆದ 8 ವರ್ಷಗಳಿಂದ ಸೇವೆಯಿಂದ ಬಿಡುಗಡೆ ಹೊಂದಿದ್ದರು. ಕಳೆದ 5 ವರ್ಷಗಳಿಂದ ಅಸೌಖ್ಯದಿಂದ ಬಳಲುತ್ತಿರುವ ಕಾಂ.ಗಿರಿಯಪ್ಪರವರ ಅಗಲುವಿಕೆ ದುಡಿಯುವ ವರ್ಗದ ಚಳುವಳಿಗೆ ತೀರಾ ನಷ್ಟವುಂಟಾಗಿದೆ ಎಂದು CPIM ತಿಳಿಸಿದೆ.

Join Whatsapp