ಮಂಗಳೂರು: ಲಾಲ್ ಭಾಗ್ ಮುಖ್ಯರಸ್ತೆಯ ಮೇಲೆ ಉರುಳಿದ ಮರ, ವಾಹನ ಸಂಚಾರಕ್ಕೆ ಅಡಚಣೆ

Prasthutha|

►ಮೂರು ವಿದ್ಯುತ್ ಕಂಬಗಳು ಕೂಡ ಧರಾಶಾಹಿ

- Advertisement -

ಮಂಗಳೂರು: ಮಂಗಳೂರು ನಗರದ ಹೃದಯಭಾಗ ಲಾಲ್ ಭಾಗ್ ಸಮೀಪ ಹಳೆಯ ಮರವೊಂದು ರಸ್ತೆಯ ಮೇಲೆ ಉರುಳಿದ ಪರಿಣಾಮ ಕೆಲವು ಹೊತ್ತು ವಾಹನ ಸಂಚಾರಕ್ಕೆ ಅಡಚಣೆಯಾದ ಘಟನೆ ಮಂಗಳವಾರ ಸಂಜೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.

ಲೇಡಿಹಿಲ್ – ಲಾಲ್ ಭಾಗ್ ಮಧ್ಯದ ಪಬ್ಬಾಸ್ ಮುಂಭಾಗದ ಮುಖ್ಯರಸ್ತೆಯಲ್ಲಿ ಬೃಹತ್ ಗಾತ್ರದ ಹಳೆಯ ಮರ ಭಾರೀ ಮಳೆಗೆ ವಿದ್ಯುತ್ ತಂತಿಯ ಮೇಲೆ ಬಿದ್ದು ರಸ್ತೆಗುರುಳಿದೆ. ಪರಿಣಾಮ ಮೂರು ವಿದ್ಯುತ್ ಕಂಬಗಳು ಕೂಡ ರಸ್ತೆಯ ಮೇಲೆ ಬಿದ್ದಿವೆ. ತಕ್ಷಣ ಮೆಸ್ಕಾಂ ವಿದ್ಯುತ್ ಸ್ಥಗಿತಗೊಳಿಸಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ.

- Advertisement -

ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಮತ್ತು ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮರವನ್ನು ರಸ್ತೆಯಿಂದ ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದರು.

ಯಾವಾಗಲೂ ಈ ರಸ್ತೆಯಲ್ಲಿ ಸಂಚಾರ ದಟ್ಟಣೆ ಇರುತ್ತದೆ. ಆದರೆ ಮರ ಬೀಳುವ ಸಂದರ್ಭದಲ್ಲಿ ವಾಹನಗಳ ಓಡಾಟ ಕಡಿಮೆ ಇದ್ದುದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಆದರೆ ವಾಹನ ಸಂಚಾರ ಅಡಚಣೆಯಾಗಿದ್ದು, ವಾಹನಗಳು ಸಾಲು ಗಟ್ಟಿ ನಿಂತಿರುವುದು ಕಂಡುಬಂತು.



Join Whatsapp