ಮಂಗಳೂರು: ಜಿಲ್ಲೆಯಲ್ಲಿ ಮೂರು ಹೊಸ ಪಿ ಯು ಕಾಲೇಜುಗಳಿಗೆ ಅನುಮತಿ

Prasthutha|

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ಹೊಸ ಪದವಿಪೂರ್ವ ಕಾಲೇಜುಗಳನ್ನು ತೆರೆಯಲು ಪದವಿಪೂರ್ವ ಶಿಕ್ಷಣ ಇಲಾಖೆ ಅನುಮತಿ ನೀಡಿದ್ದು, ಈ ವರ್ಷದಿಂದಲೇ ಈ ಕಾಲೇಜುಗಳಲ್ಲಿ ತರಗತಿಗಳು ಆರಂಭವಾಗಿವೆ.

- Advertisement -

‘ಹಿಜಾಬ್-ಕೇಸರಿ ಶಾಲು  ವಿವಾದದ ನಂತರ ಮುಸ್ಲಿಂ ಶಿಕ್ಷಣ ಸಂಸ್ಥೆಗಳು ಪಿಯು ಕಾಲೇಜು ಆರಂಭಕ್ಕೆ ಹೆಚ್ಚು ಆಸಕ್ತಿ ತೋರಿವೆ. ಈಗಾಗಲೇ ಸಲ್ಲಿಕೆಯಾಗಿರುವ ಅರ್ಜಿಗಳಲ್ಲಿ ಹೆಚ್ಚಿನವು ಮುಸ್ಲಿಂ ಸಂಸ್ಥೆಗಳದ್ದಾಗಿವೆ’ ಎಂದು ಮೂಲಗಳು ತಿಳಿಸಿವೆ.

‘ಜಿಲ್ಲೆಯಲ್ಲಿ ಒಟ್ಟು 14 ಸಂಸ್ಥೆಗಳು ಅರ್ಜಿ ಸಲ್ಲಿಸಿದ್ದು, ಬೆಳ್ತಂಗಡಿ ತಾಲ್ಲೂಕಿನ ಗೇರುಕಟ್ಟೆ, ಕುಮಾರಸ್ವಾಮಿ ಪದವಿ ಪೂರ್ವ ಕಾಲೇಜು ಸುಬ್ರಹ್ಮಣ್ಯ, ಸಹರಾ ಪದವಿಪೂರ್ವ ಕಾಲೇಜು ಅಡ್ಡೂರು ಇವುಗಳಿಗೆ ಅನುಮತಿ ದೊರೆತಿದೆ.

- Advertisement -

ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಡಿಪಿಯು ಜಯಣ್ಣ  ಅವರು,   ದಾಖಲೆಗಳ ಅಸಮರ್ಪಕ ಪೂರೈಕೆಯ ಕಾರಣದಿಂದ ಉಳಿದ ಅರ್ಜಿಗಳು ಬಾಕಿ ಇವೆ. ಕಾಲೇಜು ಆರಂಭಕ್ಕೆ ಅನುಮತಿ ನೀಡುವುದು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರ ಅಧಿಕಾರವಾಗಿದೆ. ಸ್ಥಳೀಯವಾಗಿ ಬಂದಿರುವ ಅರ್ಜಿಗಳನ್ನು ಇಲ್ಲಿಂದ ಕೇಂದ್ರ ಕಚೇರಿಗೆ ಕಳುಹಿಸಲಾಗುತ್ತದೆ’ ಎಂದು ಹೇಳಿದರು.



Join Whatsapp