ಮಂಗಳೂರು: ಕಂಕನಾಡಿಯಲ್ಲಿ ತಾತ್ಕಾಲಿಕ ಮಾರ್ಗ ಬದಲಾವಣೆ

Prasthutha|

ಮಂಗಳೂರು : ನಗರದ ಕಂಕನಾಡಿ ಪ್ರದೇಶದ ಕಂಕನಾಡಿ ವೃತ್ತದಲ್ಲಿನ ವಾಹನ ಸಂಚಾರ ಸಮಸ್ಯೆಯ ನಿವಾರಣೆಗಾಗಿ ತಾತ್ಕಾಲಿಕವಾಗಿ ಮಾರ್ಗ ಬದಲಾವಣೆ ಮಾಡಲಾಗಿದೆ.

- Advertisement -

ಫಳ್ನೀರ್ ಕಡೆಯಿಂದ ಪಂಪ್ ವೆಲ್ ಕಡೆಗೆ ಹೋಗುವ ಎಲ್ಲಾ ತರಹದ ವಾಹನಗಳ ಸವಾರರು ಕಂಕನಾಡಿ ವೃತ್ತದಲ್ಲಿ ಎಡಕ್ಕೆ ತಿರುಗಿ ಕರಾವಳಿ ವೃತ್ತದಲ್ಲಿ ಬಲಕ್ಕೆ ತಿರುಗಿ ಮುಂದಕ್ಕೆ ಹೋಗುವುದು.

ಫಳ್ನೀರ್ ಕಡೆಯಿಂದ ವೇಲೆನ್ಸಿಯಾ ಕಡೆಗೆ ಹೋಗುವ ಎಲ್ಲಾ ತರಹದ ವಾಹನ ಸವಾರರು ಕಂಕನಾಡಿ ವೃತ್ತದಲ್ಲಿ ಎಡಕ್ಕೆ ತಿರುಗಿ ಕರಾವಳಿ ವೃತ್ತದಲ್ಲಿ ಯೂ ಟರ್ನ್ ಪಡೆದು ಮುಂದಕ್ಕೆ ಹೋಗುವುದು.

- Advertisement -

ಫಳ್ನೀರ್ ಕಡೆಯಿಂದ ಮಂಗಳಾದೇವಿ ಕಡೆಗೆ ಹೋಗುವ ವಾಹನ ಸವಾರರು ಸ್ಟರ್ರಾಕ್ ರಸ್ತೆ, ನಂದಿಗುಡ್ಡ ರಸ್ತೆ ಮುಖಾಂತರ ಕೋಟಿ ಚೆನ್ನಯ್ಯ ವೃತ್ತವನ್ನು ಬಳಸಿ ಹೋಗುವುದು.

Join Whatsapp