ಮಂಗಳೂರು ದಕ್ಷಿಣ ಜೆಡಿಎಸ್ ಅಭ್ಯರ್ಥಿ ಡಾ.‌ಸುಮತಿ ಹೆಗ್ಡೆ ನಗರದಲ್ಲಿ ಬಿರುಸಿನ ಪ್ರಚಾರ

Prasthutha|

ಮಂಗಳೂರು: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ‌ ಜೆಡಿಎಸ್ ಅಭ್ಯರ್ಥಿ  ಸುಮತಿ ಹೆಗ್ಡೆಯವರು  ಮಂಗಳೂರು ನಗರದ ಸ್ಟೇಟ್ ಬ್ಯಾಂಕ್ ,  ಮೀನು ಮಾರುಕಟ್ಟೆ   ರಾವ್ & ರಾವ್ ರಸ್ತೆಯಲ್ಲಿ ಕಾಲ್ನಡಿಗೆ ಮೂಲಕ ಬಿರುಸಿನ ಮತಯಾಚನೆ ಮಾಡಿದರು.

- Advertisement -

ಈ‌ ಸಂಧರ್ಭ ಜೆಡಿಎಸ್  ದ.ಕ.‌ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ರಮೀಝಾ ನಾಸಿರ್ , ದಿನೇಶ್ ಮೈಕಲ್ ಪಯಿಸ್,  ನಾಸೀರ್  , ಅಲ್ತಾಫ್ ತುಂಬೆ , ಅನ್ಸಾರ್ , ಲತೀಫ್  ಶಿವಭಾಗ್, ವೀಣಾ ಶೆಟ್ಟಿ , ಕವಿತಾ , ಶಾರದಾ ಶೆಟ್ಟಿ  ಹಾಗೂ ಹಲವಾರು ಜೆಡಿಎಸ್ ಕಾರ್ಯಕರ್ತರು  ಉಪಸ್ಥಿತರಿದ್ದರು.

 ‌ಮತಯಾಚನೆ ಸಂದರ್ಭ ಉತ್ತಮ ಸ್ಪಂದನೆ ದೊರಕಿತ್ತು. ಪಕ್ಷ‌ದ ಅಭ್ಯರ್ಥಿ ಕ್ಷೇತ್ರದ ಮತದಾರರ ಅಹವಾಲುಗಳನ್ನು ಸ್ವೀಕರಿಸಿ , ಗೆದ್ದು ಬಂದರೆ ಪರಿಹರಿಸುವ ಭರವಸೆ ನೀಡಿದರು. ‌ಮತಯಾಚನೆಯ ಸಂದರ್ಭ ಸಾರ್ವಜನಿಕರು ಈ‌ ಬಾರಿ ಬದಲಾವಣೆ ಬಯಸಿ, ಕಾಂಗ್ರೆಸ್ ಹಾಗೂ ಬಿಜೆಪಿಯನ್ನು ದೂರ ಇಡುವ ಬಗ್ಗೆ ತಿಳಿಸಿದ್ದು ಜೆಡಿಎಸ್ ಪಕ್ಷಕ್ಕೆ ಸಕಾರಾತ್ಮಕವಾದ ಸ್ಪಂದನೆ ದೊರಕುತ್ತಿದೆ.

Join Whatsapp