ಮಂಗಳೂರು: SDTU ವತಿಯಿಂದ ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆ

Prasthutha|

ಮಂಗಳೂರು, ಮೇ.1: ಸೋಶಿಯಲ್ ಡೆಮೋಕ್ರಟಿಕ್ ಟ್ರೇಡ್ ಯೂನಿಯನ್ ಮಂಗಳೂರು ದಕ್ಷಿಣ ಏರಿಯಾ ಸಮಿತಿ ಹಾಗೂ ಸೋಶಿಯಲ್ ಡೆಮೋಕ್ರಟಿಕ್ ಆಟೋ ಚಾಲಕರ ಯೂನಿಯನ್ ಮಂಗಳೂರು ನಗರ ಸಮಿತಿ ವತಿಯಿಂದ ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಪ್ರಯುಕ್ತ ಆಟೋ ರಿಕ್ಷಾ ರ್‍ಯಾಲಿ, ಕಾಲ್ನಡಿಗೆ ಜಾಥಾ ಮತ್ತು ಸಭಾ ಕಾರ್ಯಕ್ರಮ ಬೈತ ದೆಕ್ಕೆ (ಪೋರ್ಟ್) ನಲ್ಲಿ ಯೂನಿಯನ್ ಅಧ್ಯಕ್ಷ ಇಕ್ಬಾಲ್ ಬೂಟ್ ಪ್ಯಾಲೇಸ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು

- Advertisement -

ಈ ಸಂದರ್ಭದಲ್ಲಿ ಮಾತನಾಡಿದ SDTU ರಾಜ್ಯ ಕಾರ್ಯದರ್ಶಿ ಖಾದರ್ ಫರಂಗಿಪೇಟೆ, ಜಗತ್ತಿನಾದ್ಯಂತ ಕಾರ್ಮಿಕರ ಹೋರಾಟದ ಎಶೋಗಾಥೆಯನ್ನು ಸ್ಮರಿಸುವ ಮತ್ತು ಕಾರ್ಮಿಕರ ಹಿತಕಾಂಕ್ಷೆ, ಶ್ರೇಯೋಭಿವ್ರದ್ಧಿಗಾಗಿ ಸಂಘಟಿತವಾಗುವ ಚರ್ಚೆಗಳು, ಕಾರ್ಯ ಕ್ರಮಗಳು, ಜಾಗ್ರತಿ ಜಾಥಾಗಳನ್ನು ಹಮ್ಮಿಕೊಳ್ಳುವ ಮೂಲಕ ಕಾರ್ಮಿಕ ಸಂಘಗಳು ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಆಚರಿಸುತ್ತಿದ್ದೇವೆ ಈ ದಿನ ಆಚರಣೆಗೆ ಸೀಮಿತವಾಗದೆ ಕಾರ್ಮಿಕರ ಜ್ವಲಂತ ಸಮಸ್ಯೆಗಳ ಬಗ್ಗೆ ಪರಿಹಾರಕ್ಕಾಗಿ ಕಾನೂನು ರೂಪಿಸುವುದಕ್ಕೆ ಈ ದಿನ ಪ್ರೇರಣೆಯಾಗಲಿ ಇದಕ್ಕಾಗಿ ಜಾಗೃತಿ ಕಾರ್ಯಕ್ರಮ ಹೋರಾಟ ನಡೆಸಲು ಎಲ್ಲಾ ಯೂನಿಯನ್ ಗಳು ಪ್ರಯತ್ನಿಸಲಿ ಎಂದರು

ಆಟೋ ಯೂನಿಯನ್ ನಗರ ಸಮಿತಿ ಅಧ್ಯಕ್ಷ ಇಲ್ಯಾಸ್ ಬೆಂಗರೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು
ಯೂನಿಯನ್ ಕಾರ್ಯದರ್ಶಿ ಅನ್ಸಾರ್ ಕುದ್ರೋಳಿ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು
ಮುಸ್ತಫಾ ಪಾರ್ಲಿಯಾ ನಿರೂಪಿಸಿ ಶೆರೀಫ್ ಕುತ್ತಾರ್ ದನ್ಯವಾದಗೈದರು
ಹಿರಿಯ ಆಟೋ ಚಾಲಕ ಅಬ್ದುಲ್ ಸೆಲೀಮ್ ಹಾಗೂ ಹಿರಿಯ ಆಟೋ ಚಾಲಕರಾದ ಅಬ್ದುಲ್ ರಜಾಕ್, ಹಸೈನಾರ್ ರವರನ್ನು ಸನ್ಮಾನಿಸಲಾಯಿತು
ಸಭಾ ಕಾರ್ಯಕ್ರಮಕ್ಕೆ ಮುಂಚೆ ಬಂದರ್ ಕಚ್ಚಿ ರಿಕ್ಷಾ ಪಾರ್ಕ್ ನಿಂದ ಸ್ಟೇಟ್ ಬ್ಯಾಂಕ್ ರಸ್ತೆ ಮೂಲಕ ಬಂದರ್ ಬೈತ ದೆಕ್ಕೆಗೆ ಆಟೋ ರಿಕ್ಷಾ ಮತ್ತು ಕಾಲ್ನಡಿಗೆ ಜಾಥಾ ನಡೆಯಿತು.



Join Whatsapp