ಮಂಗಳೂರು, SDTU ಆಟೋ ಚಾಲಕರ ಯೂನಿಯನ್ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಆಟೋ ರ್‍ಯಾಲಿ

Prasthutha|

ಮಂಗಳೂರು: SDTU ಆಟೋ ಚಾಲಕರ ಯೂನಿಯನ್ ಮಂಗಳೂರು ನಗರ ಸಮಿತಿ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಆಟೋ ರ್‍ಯಾಲಿ ನಡೆಸಲಾಯಿತು.

- Advertisement -


ಈ ಸಂದರ್ಭದಲ್ಲಿ ಮಾತನಾಡಿದ SDTU ರಾಜ್ಯ ಕೋಶಾಧಿಕಾರಿ ಖಾದರ್ ಫರಂಗಿಪೇಟೆ, ಕನ್ನಡ ನಾಡು ನುಡಿಯ ಅಸ್ಮಿತೆಗಾಗಿ ಹೋರಾಟ ನಡೆಸಿದ ಹೋರಾಟಗಾರರ ಯಶೋಗಾಥೆಯನ್ನು ವಿವರಿಸಿದ ಅವರು ನಾಡು ನುಡಿಯ ಅಸ್ಮಿತೆಯನ್ನು ಕಬಳಿಸುವ ಹುನ್ನಾರದ ಪ್ರಯತ್ನಕ್ಕೆ ಕನ್ನಡಿಗೆರೆಲ್ಲರೂ ಒಟ್ಟು ಸೇರಿ ವಿಫಲಗೊಳಿಸಬೇಕೆಂದು ಹೇಳಿದರು.


SDTU ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇರ್ಫಾನ್ ಕಾನ, ಕಾರ್ಯದರ್ಶಿ ಮುಸ್ತಫಾ ಪರ್ಲಿಯಾ, ದಕ್ಷಿಣ ಕ್ಷೇತ್ರ ಅಧ್ಯಕ್ಷ ಇಕ್ಬಾಲ್ ಕಣ್ಣೂರು, ಆಟೋ ಯೂನಿಯನ್ ಮಂಗಳೂರು ನಗರ ಕಾರ್ಯದರ್ಶಿ ಶರೀಫ್ ಕುತ್ತಾರ್, ಮಜೀದ್ ಉಳ್ಳಾಲ, ಫಿರೋಝ್ ಪಡುಬಿದ್ರೆ, ಶೆರೀಫ್ ಪಕಲಡ್ಕ ಮತ್ತಿತರರು ಉಪಸ್ಥಿತರಿದ್ದರು.

Join Whatsapp