ಮಂಗಳೂರಿನಲ್ಲಿ ಮತ್ತೊಮ್ಮೆ ದೇಶದಲ್ಲಿಯೇ ಗರಿಷ್ಠ ತಾಪಮಾನ ದಾಖಲು: ನಾಗರಿಕರಲ್ಲಿ ಆತಂಕ

Prasthutha|

ಮಂಗಳೂರು: ಮತ್ತೂಮ್ಮೆ ಮಂಗಳೂರಿನಲ್ಲಿ ದೇಶದಲ್ಲಿಯೇ ಗರಿಷ್ಠ ತಾಪಮಾನ ದಾಖಲಾಗಿದೆ.

- Advertisement -


38.8 ಡಿ.ಸೆ. ತಾಪಮಾನ ಬುಧವಾರ ಮಂಗಳೂರಿನಲ್ಲಿ ದಾಖಲಾಗಿತ್ತು. ಈ ತಾಪಮಾನ ಮಾರ್ಚ್ ತಿಂಗಳಿನಲ್ಲಿ 2010ರಿಂದೀಚೆಗಿನ ದಾಖಲೆಯ ಉಷ್ಣತೆಯಾಗಿದೆ. ಆರು ದಿನಗಳ ಹಿಂದೆ ಅಂದರೆ, ಮಾ. 2ರಂದು ಮಂಗಳೂರಿನಲ್ಲಿ ದೇಶದಲ್ಲಿಯೇ ಗರಿಷ್ಠ ಎನಿಸಿದ್ದ 37.9 ಡಿ.ಸೆ. ದಾಖಲಾಗಿತ್ತು.


ದಿನದಿಂದ ದಿನಕ್ಕೆ ಬಿಸಿಲ ತಾಪ ಗಣನೀಯವಾಗಿ ಏರಿಕೆಯಾಗುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಇದರ ನಡುವೆಯೇ ತಾಪಮಾನ 2ರಿಂದ 3 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.



Join Whatsapp