ಮಂಗಳೂರು: 4ನೇ ದಿನವೂ ಮುಂದುವರೆದ ಪೌರ ಕಾರ್ಮಿಕ ಮುಷ್ಕರ

Prasthutha|

ಮಂಗಳೂರು: ದ.ಕ ಜಿಲ್ಲೆಯಲ್ಲಿ ಪೌರ ಕಾರ್ಮಿಕರ ಮುಷ್ಕರ ನಾಲ್ಕನೇ ದಿನವೂ ಮುಂದುವರೆದಿದ್ದು, ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನಾಕರರು ಘೋಷಣೆಯನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ದ.ಕ ಜಿಲ್ಲೆಯಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆಯಂತೂ ಬಿಗಡಾಯಿಸಿದೆ. ಸಿಎಂ ಜತೆಯಲ್ಲಿ ಜು .4 ರಂದು ನಡೆಯುವ ಸಭೆ ಸಫಲವಾಗದೇ ಹೋದಲ್ಲಿ ಈ ಮುಷ್ಕರ ಮತ್ತೆ ಮುಂದುವರಿಯುವ ಸಾಧ್ಯತೆಗಳು ದಟ್ಟವಾಗಿದೆ ಎಂದು ಸಂಘಟನೆಯ ಮುಖಂಡರು ಮಾಹಿತಿ ನೀಡಿದ್ದಾರೆ.

ಶುಕ್ರವಾರದಿಂದ ಪೌರ ಕಾರ್ಮಿಕರು ಮುಷ್ಕರ ಇಂದು ಕೂಡ ಮುಂದುವರೆಸಿದ್ದಾರೆ . ಕಳೆದ ಕೆಲವು ದಿನಗಳಿಂದ ಕಸ ವಿಲೇವಾರಿಯಾಗದೇ ಪ್ರತಿಯೊಂದು ವಾರ್ಡ್ ಕೂಡ ಗಬ್ಬೇರಿದೆ. ಅಪಾರ್ಟ್ ಮೆಂಟ್, ಫ್ಲ್ಯಾಟ್ ಗಳಲ್ಲಿ ವಾಸ ಇರುವ ಮಂದಿ ಕಸ ವಿಲೇವಾರಿಯಾಗದೇ ತೀವ್ರ ಸಮಸ್ಯೆಗೆ ಗುರಿಯಾಗಿದ್ದಾರೆ.

- Advertisement -

ವಿವಿಧ ಬೇಡಿಕೆಗಳನ್ನು ಮುಂದಿಟ್ಟು ರಾಜ್ಯಾದ್ಯಂತ ಈ ಮುಷ್ಕರ ನಡೆಯುತ್ತಿದ್ದು, ದ.ಕ. ಜಿಲ್ಲೆಯಲ್ಲೂ ನಡೆಯುತ್ತಿರುವ ಮುಷ್ಕರದಲ್ಲಿ ಪೌರ ಕಾರ್ಮಿಕರು ತಮ್ಮ ಕೆಲಸಗಳನ್ನು ಸ್ಥಗಿತಗೊಳಿಸಿ ಭಾಗವಹಿಸುತ್ತಿದ್ದಾರೆ.

ಪೌರ ಕಾರ್ಮಿಕ ಮುಷ್ಕರಕ್ಕೆ SDTU ಬೆಂಬಲ

ಬೆಂಗಳೂರು, ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ರಾಜ್ಯದಲ್ಲಿ ಪೌರ ಕಾರ್ಮಿಕರು ಚಾಲಕರು, ಸಹಾಯಕರು ನಡೆಸುತ್ತಿರುವ ಮುಷ್ಕರಕ್ಕೆ ಸೋಶಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ (ಎಸ್.ಡಿ.ಟಿ.ಯು) ಸಂಪೂರ್ಣ ಬೆಂಬಲ ಸೂಚಿಸಿದೆ.

ಕಾರ್ಮಿಕರು ಕೆಲಸದ ವೇಳೆ ಅಪಾಯಕಾರಿ ತ್ಯಾಜ್ಯಗಳನ್ನು, ಮೊಣಚಾದ ವಸ್ತುಗಳನ್ನು ಸಂಗ್ರಹಿಸುವುದರಿಂದ ಅವರು ಕಣ್ಣಿನ, ಉಸಿರಾಟದ, ಚರ್ಮದ  ಸಮಸ್ಯೆಗೆ ತುತ್ತಾಗಿ ಆರೋಗ್ಯಕ್ಕೆ ಹಾನಿಕಾರವಾಗುವ ಸವಾಲುಗಳಿಗೆ ಮೈಯೊಡ್ಡಿ ಕೆಲಸ ನಿರ್ವಹಿಸುತ್ತಿದ್ದಾರೆ

ವರ್ಷದ 365 ದಿನಗಳು ಕೆಲಸ ನಿರ್ವಹಿಸುತ್ತಿರುವ ಪೌರ ಕಾರ್ಮಿಕರು ಯಾವುದೇ ಉಪಕರಣ ಇಲ್ಲದೆ ರಾಜ್ಯದ ಜನರ ಆರೋಗ್ಯದ ಹಿತ ದ್ರಷ್ಟಿ ಮತ್ತು ಕರ್ತವ್ಯ ಪ್ರಜ್ಞೆಯಿಂದ ಕೆಲಸ ನಿರ್ವಹಿಸುತ್ತಾ ಇದ್ದಾರೆ.

ಪೌರ ಕಾರ್ಮಿಕರು ಸಮಾಜಕ್ಕೆ ನೀಡುವ ಕೊಡುಗೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಅವರ ಬೇಡಿಕೆಗಳಿಗೆ ಪ್ರಜ್ಞಾಪೂರ್ವಕ ತಕ್ಷಣ ಸ್ಪಂದಿಸಬೇಕು ಮತ್ತು ಅಭಿವೃದ್ಧಿಗೆ ಪೂರಕವಾಗಿರುವ ಪೌರ ಕಾರ್ಮಿಕರ ಶ್ರಮ ಎಂದು ಪರಿಗಣಿಸಿ ಶೀಘ್ರ ಪರಿಹಾರ ಕಂಡುಕೊಳ್ಳಲು SDTU ರಾಜ್ಯಾಧ್ಯಕ್ಷ ಅಬ್ದುಲ್ ರಹೀಮ್ ಪಟೇಲ್ ಸರ್ಕಾರವನ್ನು ಆಗ್ರಹಿಸಿದ್ದಾರೆ.



Join Whatsapp