ಫೆ.22ರಿಂದ ಮಂಗಳೂರು-ಪಣಜಿ ರಾಜಹಂಸ ಬಸ್ ಸೇವೆ ಪ್ರಾರಂಭ

Prasthutha|

ಮಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಮಂಗಳೂರಿನಿಂದ ಉಡುಪಿ ಕುಂದಾಪುರ ಬೈಂದೂರು, ಭಟ್ಕಳ, ಹೊನ್ನಾವರ ಕುಮಟಾ, ಅಂಕೋಲಾ, ಕಾರವಾರ, ಕಾನಕೋನ, ಮಡಗಾಂವ್, ಮಂಗೇಶಿ, ಪಣಜಿ ಹಾಗೂ ಬರುವ ಮಾರ್ಗದಲ್ಲಿ ಪಣಜಿ, ಕೊರ್ಟಾಲಿಂ, ಮಡಗಾಂವ್, ಕಾನಕೋನ, ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಬೈಂದೂರು, ಕುಂದಾಪುರ, ಮಣಿಪಾಲ, ಉಡುಪಿ ಮಾರ್ಗವಾಗಿ ರಾಜಹಂಸ ಹೊಸ ಸಾರಿಗೆಯನ್ನು ಇದೇ ಫೆ.22ರಿಂದ ಪ್ರಾರಂಭಿಸಲಿದೆ.

- Advertisement -

    ಸಾರಿಗೆಯು ಮಂಗಳೂರು ಬಸ್ಸು ನಿಲ್ದಾಣದಿಂದ ರಾತ್ರಿ 9 ಗಂಟೆಗೆ ಹೊರಟು ಉಡುಪಿಯಲ್ಲಿ 10.15 ರಿಂದ 10.30ರ ವರೆಗೆ,  ಕುಂದಾಪುರಕ್ಕೆ 11.15ಕ್ಕೆ ತಲುಪುವುದು. ನಂತರ ಭಟ್ಕಳ 12.15ಕ್ಕೆ ಹೊರಟು ಹೊನ್ನಾವರ 12.45, ಅಂಕೋಲಾಕ್ಕೆ ರಾತ್ರಿ 2ಗೆ ತಲುಪುವುದು. ನಂತರ ಕಾರವಾರದಲ್ಲಿ 2.30 ರಿಂದ 2.45ರ ವೆರಗೆ, ಪಣಜಿಗೆ ಮುಂಜಾನೆ 5.30ಗಂಟೆಗೆ ತಲುಪುವುದು.

 ಮರು ಪ್ರಯಾಣದಲ್ಲಿ ಪಣಜಿಯಿಂದ ರಾತ್ರಿ 8 ಗಂಟೆಗೆ ಹೊರಟು ಮಡಗಾಂವ್ 8.45, ಕಾರವಾರ 9.45, ಕುಮಟಾ 11.45, ಭಟ್ಕಳ 1.15ಕ್ಕೆ ತಲುಪುವುದು. ನಂತರ ಕುಂದಾಪುರ 2ಗಂಟೆಗೆ ಅಲ್ಲಿಂದ ಉಡುಪಿ 3 ಗಂಟೆಗೆ ನಂತರ ಮಂಗಳೂರು ರೈಲು ನಿಲ್ದಾಣಕ್ಕೆ ಮುಂಜಾನೆ 4 ಗಂಟೆಗೆ  ತಲುಪುವುದು. 

- Advertisement -

     ಈ ಸಾರಿಗೆಯಲ್ಲಿ ಮಂಗಳೂರಿನಿಂದ ಪಣಜಿಗೆ ಪ್ರತಿ ಪ್ರಯಾಣಿಕರಿಗೆ ಒಟ್ಟು ಪ್ರಯಾಣದರ 620 ರೂ.ಗಳು, ಉಡುಪಿಯಿಂದ ಪಣಜಿಗೆ 590 ರೂ.ಗಳು, ಕುಂದಾಪುರದಿಂದ ಪಣಜಿಗೆ 570 ರೂ.ಗಳಾಗಿದೆ. ಈ ಸಾರಿಗೆಗೆ ಅವತಾರ್ ವ್ಯವಸ್ಥೆ ಮೂಲಕ ಮುಂಗಡ ಆಸನ ಕಾದಿರಿಸುವ ವ್ಯವಸ್ಥೆ ಇರುತ್ತದೆ. ಹೆಚ್ಚಿನ ಮಾಹಿತಿಗೆ ಸಂಸ್ಥೆಯ  ವೆಬ್ ಸೈಟ್ ಅಥವಾ ಹತ್ತಿರದ ರಿಸರ್ವೇಶನ್ ಕೌಂಟರ್ ಹಾಗೂ ಮೊಬೈಲ್‍ಸಂಖ್ಯೆ: ಮಂಗಳೂರು ಬಸ್ಸು ನಿಲ್ದಾಣ – 7760990720, ಮಂಗಳೂರು ಮುಂಗಡ ಬುಕ್ಕಿಂಗ್ ಕೌಂಟರ್- 9663211553, ಉಡುಪಿ ಡಾ. ವಿ.ಎಸ್. ಆಚಾರ್ಯ ಬಸ್ಸು ನಿಲ್ದಾಣ- 7795984182, ಉಡುಪಿ ಬಸ್ಸು ನಿಲ್ದಾಣ – 9663266400 ಹಾಗೂ ಕುಂದಾಪುರ ಬಸ್ಸು ನಿಲ್ದಾಣ- 9663266009 ಅನ್ನು ಸಂಪರ್ಕಿಸುವಂತೆ ಕರಾರಸಾ ಸಂಸ್ಥೆಯ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



Join Whatsapp