ಮಂಗಳೂರು “ಓವರ್” ಸ್ಮಾರ್ಟ್: ಬೆಳಕಿಗೆ ಬರುತ್ತಿದೆ ಬುದ್ಧಿವಂತರ ಜಿಲ್ಲೆಯ ಅವೈಜ್ಞಾನಿಕ ಕಾಮಗಾರಿ !

Prasthutha|

ಮಂಗಳೂರು:  ನಗರ ಮತ್ತಷ್ಟು ಸ್ಮಾರ್ಟ್ ಆಗಿ ರೂಪುಗೊಳ್ಳಲು ಸ್ಮಾರ್ಟ್ ಸಿಟಿ ಯೋಜನೆಯಡಿ ಮಂಗಳೂರಿನಲ್ಲಿ 1659 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳು ಅನುಷ್ಠಾನಗೊಳ್ಳುತ್ತಿವೆ. ಆದರೆ ಇಲ್ಲಿನ ಕಾಮಗಾರಿ ಅವೈಜ್ಞಾನಿಕವಾಗಿ ರೂಪುಗೊಂಡಿರುವುದು ಬೇಸರದ ಸಂಗತಿ.

- Advertisement -

ಝೀಬ್ರಾ ಕ್ರಾಸಿಂಗ್ ಗೆ ಬ್ಯಾರಿಕೇಟ್

ನಗರದ ಹಂಪನಕಟ್ಟೆಯ ಸಿಗ್ನಲ್ ಬಳಿ ವೆನ್ಲಾಕ್ ನಿಂದ ನೆಹರೂ ಮೈದಾನಕ್ಕೆ ಹೋಗುವ ರಸ್ತೆಯಲ್ಲಿ ಝೀಬ್ರಾ ಕ್ರಾಸಿಂಗ್ ವ್ಯವಸ್ಥೆ ಮಾಡಲಾಗಿದೆ. ಆದರೆ ರಸ್ತೆಯ ಇನ್ನೊಂದು ಬದಿಯಲ್ಲಿ ಫುಟ್ ಪಾತ್ ಗೆ ಸ್ಟೀಲ್ ರಾಡ್ ಗಳ ಬ್ಯಾರಿಕೇಡ್ ಗಳನ್ನು ಅಳವಡಿಸಲಾಗಿದ್ದು, ಪಾದಾಚಾರಿಗಳು ಜಂಪ್ ಮಾಡಿ ದಾಟಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈ ಚಿತ್ರ ವೈರಲ್ ಆಗುತ್ತಿದ್ದಂತೆ ಸ್ಟೀಲ್ ರಾಡ್ ಗಳನ್ನು ತೆರವುಗೊಳಿಸಲಾಗಿದೆ.

- Advertisement -

ಪುಟ್ ಪಾತ್ ನಡುವೆ ಕಂಬ

ನಗರದ ಪಿವಿಎಸ್ ಜಂಕ್ಷನ್ ಸಮೀಪ ಎಲೆಕ್ಟ್ರಿಕ್ ಕಂಬವನ್ನು ತೆರವುಗೊಳಿಸದೇ ಹಾಗೆಯೇ ಕಾಮಗಾರಿ ನಡೆಸಲಾಗಿದ್ದು ಈ ಮಾರ್ಗದಲ್ಲಿ ಪಾದಚಾರಿಗಳು ನುಸುಳಿಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ನಡು ರಸ್ತೆಯಲ್ಲಿಯೇ  ವಿದ್ಯುತ್ ಕಂಬ

ನಗರದ ಜೈಲ್ ರೋಡ್ ನಲ್ಲಿ ವಿದ್ಯುತ್ ಕಂಬವನ್ನು ತೆರವುಗೊಳಿಸದೇ ಕಾಂಕ್ರಿಟ್ ರಸ್ತೆ ನಿರ್ಮಿಸಿದ್ದು, ವಾಹನ ಸವಾರ ಎಚ್ಚರ ತಪ್ಪಿದರೆ ಕಂಬಕ್ಕೆ ಡಿಕ್ಕಿ ಹೊಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಾತ್ರವಲ್ಲ ಹಲವು ರಸ್ತೆಗಳ ಮಧ್ಯಭಾಗದಲ್ಲಿ ಒಳಚರಂಡಿಯ ಮ್ಯಾನ್ ಹೋಲ್ ಗಳು ಕೂಡ ಕಂಡುಬರುತ್ತಿದ್ದು, ಕೆಲವೆಡೆ ಇದು ತೆರೆದೇ ಇರುವುದು ಕಂಡುಬಂದಿದೆ. ಒಟ್ಟಿನಲ್ಲಿ ಸ್ಮಾರ್ಟ್ ಸಿಟಿಯ ಕಾಮಗಾರಿ ನಗರದ ಜನರಿಗೆ ಒಂದಿಲ್ಲೊಂದು ಅವಾಂತರ ತಂದಿರುವುದು ಸುಳ್ಳಲ್ಲ.

Join Whatsapp