ಮಂಗಳೂರು: ನೀಟ್ ಅವ್ಯವಹಾರ ಖಂಡಿಸಿ NSUI, ಕಾಂಗ್ರೆಸ್ ಪ್ರತಿಭಟನೆ

Prasthutha|

ಮಂಗಳೂರು: ನೀಟ್ ಅವ್ಯವಹಾರ ಖಂಡಿಸಿ, ವಿಶೇಷ ತನಿಖೆಗೆ ಆಗ್ರಹಿಸಿ ಎನ್.ಎಸ್.ಯು.ಐ, ಜಿಲ್ಲಾ ಕಾಂಗ್ರೆಸ್ ವತಿಯಿಂದ ಇಂದು ಮಂಗಳೂರಿನಲ್ಲಿ ಪ್ರತಿಭಟನೆ ನಡೆಯಿತು.

- Advertisement -


ಈ ವೇಳೆ ಮಾತನಾಡಿದ ಪದ್ಮರಾಜ್ ಆರ್. ಪೂಜಾರಿ ಅವರು, ಸೀಟ್ ಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಪ್ರಶ್ನೆ ಪತ್ರಿಕೆ ಸೋರಿಕೆಯ ಕುತಂತ್ರ ನಡೆದಿದೆ. ರಾಹುಲ್ ಗಾಂಧಿ ವಿದ್ಯಾರ್ಥಿಗಳ ಪರ ಸದನದಲ್ಲಿ ಮಾತನಾಡಿದಾಗ ಮೈಕ್ ಬಂದ್ ಮಾಡಲಾಗಿದೆ. ಇದು ಕೇಂದ್ರ ಸರಕಾರ ವಿದ್ಯಾರ್ಥಿಗಳಿಗೆ ತೋರಿಸಿದ ಅಗೌರವವಾಗಿದೆ ಎಂದು ಹೇಳಿದರು.


ರಮಾನಾಥ ರೈ ಮಾತನಾಡಿ, ಕಳೆದ ಏಳು ವರ್ಷದಲ್ಲಿ 70 ಬಾರಿ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಧರ್ಮದ ಲೇಪದಲ್ಲಿ ದಾರಿ ತಪ್ಪಿಸುತ್ತಿದ್ದಾರೆ. ತನಿಖೆಯ ಮೇಲೆಯೂ ನಂಬಿಕೆ ಇಲ್ಲ. ಸುಪ್ರಿಂ ಕೋರ್ಟ್ ನ ಮೇಲ್ವಿಚಾರಣೆಯಲ್ಲಿ ತನಿಖೆ ಆಗಬೇಕು ಎಂದರು.

- Advertisement -


ಪ್ರಮುಖರಾದ ಪದ್ಮರಾಜ್ ಪೂಜಾರಿ, ಸುಹಾನ್ ಆಳ್ವ, ಪ್ರವೀಣ್ ಚಂದ್ರ ಆಳ್ವ, ಶಶಿಧರ ಹೆಗ್ಡೆ ಸವದ್ ಸುಳ್ಯ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Join Whatsapp