ಮಂಗಳೂರು: ಜನರ ನೆಮ್ಮದಿ ಕೆಡಿಸಿದ ಅಣಬೆ ಫ್ಯಾಕ್ಟರಿ ಮುಚ್ಚಲು ಆದೇಶ

Prasthutha|

ಮಂಗಳೂರು: ವಾಮಂಜೂರು ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಅಣಬೆ ಫ್ಯಾಕ್ಟರಿಯ ದುರ್ವಾಸನೆ ಸ್ಥಳೀಯ ನಾಗರಿಕರ ನೆಮ್ಮದಿ ಕೆಡಿಸಿದ್ದು, ಫ್ಯಾಕ್ಟರಿ ಬಂದ್ ಮಾಡಲು ಮೇಯರ್ ಸುಧೀರ್ ಶೆಟ್ಟಿ ಆದೇಶ ನೀಡಿದ್ದಾರೆ.

- Advertisement -


ಅಣಬೆ ಫ್ಯಾಕ್ಟರಿ ಮುಚ್ಚುವ ಬಗ್ಗೆ ಸಾಕಷ್ಟು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದರೂ ಕ್ರಮ ಆಗಿಲ್ಲ. ಕಂಪೆನಿ ಮುಚ್ಚುವ ಮೂಲಕ ಜನರಿಗೆ ಬದುಕುವ ಹಕ್ಕು ನೀಡಬೇಕು ಎಂದು ಸ್ಥಳೀಯ ಸದಸ್ಯೆ ಹೇಮಲತಾ ಸಭೆಯಲ್ಲಿ ಆಗ್ರಹಿಸಿದಾಗ ಆಡಳಿತ ಪಕ್ಷದ ಸದಸ್ಯರೆಲ್ಲರೂ ಧ್ವನಿಗೂಡಿಸಿ ಫ್ಯಾಕ್ಟರಿ ಮುಚ್ಚಲು ಆದೇಶಿಸುವಂತೆ ಮೇಯರ್ ಗೆ ಒತ್ತಡ ಹೇರಿದರು.


ಕಾನೂನಿನ ವಿಚಾರವೂ ಇರುವುದರಿಂದ ತಜ್ಞರ ಅಭಿಪ್ರಾಯ ಪಡೆದು ಕ್ರಮ ವಹಿಸಬೇಕಾಗಿದೆ ಎಂದು ಮೇಯರ್ ಹೇಳಿದಾಗ ಆಡಳಿತ ಪಕ್ಷದ ಸದಸ್ಯರೆಲ್ಲರೂ ಫ್ಯಾಕ್ಟರಿ ಬಂದ್ ಮಾಡಬೇಕೆಂದು ಆಗ್ರಹಿಸಿದರು. ಅದರಂತೆ ಮೇಯರ್ ಸುಧೀರ್ ಶೆಟ್ಟಿ ಫ್ಯಾಕ್ಟರಿ ಬಂದ್ ಮಾಡಲು ಆದೇಶಿಸಿದರು.

Join Whatsapp