ಮಂಗಳೂರು-ಮುಂಬೈ ವಿಮಾನ ಸೇರಿ 30 ವಿಮಾನಗಳಿಗೆ ಮತ್ತೆ ಬಾಂಬ್ ಬೆದರಿಕೆ

Prasthutha|

ಮಂಗಳೂರು: ಮಂಗಳೂರಿನಿಂದ ಮುಂಬೈಗೆ ತೆರಳಬೇಕಿದ್ದ ವಿಮಾನ ಸೇರಿದಂತೆ 30 ವಿಮಾನಗಳಿಗೆ ಬೆದರಿಕೆ ಸಂದೇಶ ಬಂದಿವೆ ಎಂದು ವಿಮಾನಯಾನ ಸಂಸ್ಥೆಗಳು ತಿಳಿಸಿವೆ.

- Advertisement -

ಅಕ್ಟೋಬರ್ 21 ರಂದು ಕೆಲವು ವಿಸ್ತಾರಾ ವಿಮಾನಗಳಿಗೆ ಸಾಮಾಜಿಕ ಮಾಧ್ಯಮದಲ್ಲಿ ಭದ್ರತಾ ಬೆದರಿಕೆ ಸಂದೇಶಗಳು ಬಂದಿವೆ. ನಾವು ತಕ್ಷಣ ಸಂಬಂಧಿತ ಅಧಿಕಾರಿಗಳಿಗೆ ಎಚ್ಚರಿಕೆ ಸಂದೇಶ ನೀಡಿದ್ದೇವೆ ಮತ್ತು ಅವರು ಎಲ್ಲಾ ಸುರಕ್ಷತಾ ಕಾರ್ಯವಿಧಾನಗಳನ್ನು ಅನುಸರಿಸಿದ್ದಾರೆ. ನಮ್ಮ ಗ್ರಾಹಕರು, ಸಿಬ್ಬಂದಿ ಮತ್ತು ವಿಮಾನಗಳ ಸುರಕ್ಷತೆ ನಮಗೆ ಅತ್ಯಂತ ಮಹತ್ವದ್ದಾಗಿದೆ ಎಂದು ವಿಸ್ತಾರ ಏರ್ಲೈನ್ಸ್ ಪ್ರಕಟಣೆ ತಿಳಿಸಿದೆ.

ಮತ್ತೊಂದೆಡೆ, ಸೋಮವಾರ ಕಾರ್ಯನಿರ್ವಹಿಸುತ್ತಿದ್ದ ಏರ್ ಇಂಡಿಯಾದ ಕೆಲವು ವಿಮಾನಗಳಿಗೆ ಬೆದರಿಕೆಗಳು ಬಂದಿವೆ ಎಂದು ಏರ್ ಇಂಡಿಯಾ ವಕ್ತಾರರು ಖಚಿತಪಡಿಸಿದ್ದಾರೆ. ಪ್ರೋಟೋಕಾಲ್ ಪ್ರಕಾರ, ಸಂಬಂಧಪಟ್ಟ ಅಧಿಕಾರಿಗಳಿಗೆ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಅಧಿಕಾರಿಗಳು ಮತ್ತು ಭದ್ರತಾ ಏಜೆನ್ಸಿಗಳ ಮಾರ್ಗದರ್ಶನದಂತೆ ಎಲ್ಲಾ ಸುರಕ್ಷತಾ ಕಾರ್ಯವಿಧಾನಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗಿದೆ ಎಂದು ಏರ್ ಇಂಡಿಯಾ ತಿಳಿಸಿದೆ.

- Advertisement -


ಯಾವೆಲ್ಲ ವಿಮಾನಗಳಿಗೆ ಬಾಂಬ್ ಬೆದರಿಕೆ?
6E-63 ದೆಹಲಿ – ಜೆಡ್ಡಾ, 6E-12 ಇಸ್ತಾಂಬುಲ್ – ದೆಹಲಿ, 6E-83 ದೆಹಲಿ – ದಮ್ಮಾಮ್, 6E-65 ಕೋಜಿಕೋಡ್ – ಜೆಡ್ಡಾ, 6E-67 ಹೈದರಾಬಾದ್ – ಜೆಡ್ಡಾ, 6E-77 ಬೆಂಗಳೂರು – ಜೆಡ್ಡಾ, 6E-18 ಇಸ್ತಾಂಬುಲ್ – ಮುಂಬೈ, 6E-164 ಮಂಗಳೂರು – ಮುಂಬೈ, 6E-118 ಲಕ್ನೋ- ಅಹಮದಾಬಾದ್ ಸೇರಿದಂತೆ ಸುಮಾರು 30 ವಿಮಾನಗಳಿಗೆ ಬಾಂಬ್ ಬೆದರಿಕೆ ಸಂದೇಶಗಳು ಬಂದಿವೆ.



Join Whatsapp