ಮಂಗಳೂರು: ನೇತ್ರಾವತಿ ನದಿ ತಟದಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

Prasthutha|

ಉಳ್ಳಾಲ: ನೇತ್ರಾವತಿ ನದಿ ತಟದಲ್ಲಿ ವ್ಯಕ್ತಿಯೋರ್ವರ ಮೃತದೇಹ ಶನಿವಾರ ಸಂಜೆ ವೇಳೆ ಪತ್ತೆಯಾಗಿದೆ.

- Advertisement -

ಮೃತದೇಹ ಸುಮಾರು 40-50ರ ಹರೆಯದ ವ್ಯಕ್ತಿಯದ್ದಾಗಿದ್ದು, ಮೃತ ವ್ಯಕ್ತಿ ಚಿಕ್ಕಮಗಳೂರು ಮೂಲದ ನಿವಾಸಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಅವರು ಶುಕ್ರವಾರ ಚಿಕಿತ್ಸೆ ನಿಮಿತ್ತ ಮಂಗಳೂರಿಗೆ ಬಂದಿದ್ದರು. ಅವರು‌ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ.

Join Whatsapp