ಮಂಗಳೂರು: ಮಂಗಳೂರು – ಮಡ್ಗಾಂವ್ ವಂದೇ ಭಾರತ್ ರೈಲಿಗೆ ಡಿಸೆಂಬರ್ 30 ರಂದು ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಮೂಲಕ ಚಾಲನೆ ನೀಡುವುದು ಬಹುತೇಕ ಖಚಿತವಾಗಿದೆ.
- Advertisement -
ಇದೇ ಸಂದರ್ಭದಲ್ಲಿ ದೇಶದ 6 ಕಡೆಗಳಲ್ಲಿ ಆರಂಭವಾಗುವ ವಂದೇ ಭಾರತ್ ರೈಲಿಗೆ ಚಾಲನೆ, ಎರಡು ಕಡೆ ಅಮೃತ್ ಭಾರತ್ ರೈಲಿಗೆ ಚಾಲನೆ ಜತೆಗೆ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿನಿರ್ಮಾಣವಾದ 4 ಮತ್ತು 5ನೇ ಫ್ಲ್ಯಾಟ್ ಫಾರಂನ ಉದ್ಘಾಟನೆ ಕೂಡ ನಡೆಯಲಿದೆ.