ಮಂಗಳೂರು: ಕೈಗಾರಿಕೆಗಳಿಂದ ಪರಿಸರ ಮಾಲಿನ್ಯಗೊಳ್ಳುತ್ತಿರುವ ಪ್ರದೇಶಗಳ ಪಟ್ಟಿಯಲ್ಲಿ ಮಂಗಳೂರು ಕೂಡ ಇದೆ ಎಂದು ವಿಧಾನ ಪರಿಷತ್ತಿನ ಸರ್ಕಾರಿ ಭರವಸೆಗಳ ಸಮಿತಿಯ ಅಧ್ಯಕ್ಷರಾದ ಬಿ.ಎಂ. ಫಾರೂಕ್ ಹೇಳಿದ್ದಾರೆ.
ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭರವಸೆಗಳು ಬಾಕಿ ಉಳಿದಿರುವ ಕಾರಣ ಜಿಲ್ಲೆಗೆ ಮೂರನೇ ಭೇಟಿ ನೀಡಿದ್ದೇವೆ. ಸಮಿತಿಯು ಒಟ್ಟು ಎಂಟು ಸಭೆಗಳನ್ನು ನಡೆಸಿದೆ. ಕಳೆದ ಸಮಿತಿಯಲ್ಲಿ ಶೇಕಡಾ 90ರಷ್ಟು ಭರವಸೆಗಳು ಪೂರ್ತಿಗೊಳಿಸಿದ್ದೇವೆ. 10 ಪರ್ಸೆಂಟ್ ಭರವಸೆಗಳು ಬಾಕಿ ಇವೆ ಎಂದು ಹೇಳಿದ್ದಾರೆ.
ಈಗಿನ ಹೊಸ ಭರವಸೆಗಳ ಸಮಿತಿ ಈಗಾಗಲೇ ನಾಲ್ಕು ಸಭೆಗಳನ್ನು ನಡೆಸಿದೆ. ಸುಮಾರು ಎರಡು ಸಾವಿರ ಭರವಸೆಗಳು ನಮ್ಮ ಮುಂದೆ ಬಾಕಿ ಇವೆ. ದಕ್ಷಿಣ ಕನ್ನಡ ಮತ್ತು ಮಂಗಳೂರಿನಲ್ಲಿ ಪರಿಸರದ ಸಮಸ್ಯೆ, ವಾಯು ಜಲ ಮಾಲಿನ್ಯದ ಬಗ್ಗೆ ಮತ್ತು ಆರೋಗ್ಯ ಸಮಸ್ಯೆ, ಅಂಡರ್ ಗ್ರೌಂಡ್ ಡ್ರೈನೇಜ್ ಸಮಸ್ಯೆ ಇದೆ. ಟ್ರಾಫಿಕ್ ಸಮಸ್ಯೆ, ಫ್ಲೈಓವರ್ ಸಮಸ್ಯೆ, ಸ್ಮಾರ್ಟ್ ಸಿಟಿ ಟೆಂಡರ್, ತೀವ್ರ ಅನಾರೋಗ್ಯ ಬಗ್ಗೆ ಅಧ್ಯಯನ ಮಾಡಿದ್ದೇವೆ ಎಂದು ತಿಳಿಸಿದರು.
ಮಂಗಳುರಿನಲ್ಲಿ ಓ.ಡಿ.ಸಿ ರಸ್ತೆ ಸಮಸ್ಯೆ ಇದ್ದು, ಮಂಗಳೂರು ಕೈಗಾರಿಕ ಪ್ರದೇಶಗಳು ಅಪಾಯಕಾರಿಯಾಗಿದೆ. ಹಲವು ತೈಲ ಪೈಪ್ ಲೈನ್ ಗಳು ಹಾದುಹೋಗಿವೆ. ನೂರಾರು ಟ್ಯಾಂಕರ್ ಗಳು ಓಡಾಡುತ್ತಿವೆ. ಏನಾದರೂ ಹೆಚ್ಚುಕಮ್ಮಿಯಾದರೆ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ತೈಲ ಘಟಕಗಳಿಂದಾಗಿ ಹವಾಮಾನ ವೈಪರಿತ್ಯ ಉಂಟಾಗಿ ಸ್ಥಳೀಯ ಗ್ರಾಮಸ್ಥರಲ್ಲಿ ಅನಾರೋಗ್ಯ ಕಂಡುಬಂದಿದೆ. ಬಾವಿಯಲ್ಲಿ ತೈಲ ಬರುವುದರಿಂದ ಮಾರಕ ಕ್ಯಾನ್ಸರ್ ರೋಗಕ್ಕೂ ತುತ್ತಾಗಿದ್ದಾರೆ. ಸಮಸ್ಯೆಗಳ ನಿವಾರಣೆಗೆ ಸಮಿತಿ ಬೆನ್ನುಬಿಡದೆ ಕೆಲಸ ಮಾಡುತ್ತಿದೆ. ಭೂ ಪರಿಹಾರದ ಭರವಸೆಯೊಂದು ಪೂರ್ತಿಯಾಗಿದೆ. ಸುರತ್ಕಲ್ ಉಳ್ಳಾಲದಲ್ಲಿ UGD ಸಮಸ್ಯೆ ನೈಮರ್ಲ್ಯ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಸಮಿತಿ ಪ್ರಯತ್ನ ಮಾಡುತ್ತಿದೆ. ಎಲ್ಲಾ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಐದು ಇಲಾಖೆಗಳನ್ನು ಸೇರಿಸಿ ಸಮಿತಿ ಮಾಡಿದ್ದೇವೆ ಎಂದು ಬಿ.ಎಂ ಫಾರೂಕ್ ತಿಳಿಸಿದರು.
.