ಮಂಗಳೂರು: ನೆಹರೂ ಕಾರು ಚಾಲಕ, ಸ್ವಾತಂತ್ರ್ಯ ಹೋರಾಟಗಾರ ಮೋನಪ್ಪ ಗೌಡ ನಿಧನ

Prasthutha|

ಸುಳ್ಯ: ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರ ಕಾರು ಚಾಲಕರಾಗಿದ್ದ ಸ್ವಾತಂತ್ರ್ಯ ಹೋರಾಟಗಾರ ಮೋನಪ್ಪ ಗೌಡ ಕೊರಂಬಡ್ಕ ಅವರು ಸುಳ್ಯದ ಕನಕಮಜಲು ಗ್ರಾಮದ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

- Advertisement -


ಅವರಿಗೆ 102 ವಯಸ್ಸಾಗಿತ್ತು. ಇವರು ವಯೋಸಹಜ ಅನಾರೋಗ್ಯದಿಂದ ನಿಧನರಾದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.


ಮಾಜಿ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರೂ ಅವರೊಂದಿಗೆ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಗುರುತಿಸಿಕೊಂಡಿದ್ದ ಮೋನಪ್ಪ ಗೌಡ ಅವರು, ನೆಹರೂ ಅವರ ಕಾರು ಚಾಲಕರಾಗಿಯೂ ಕೂಡ ಕಾರ್ಯ ನಿರ್ವಹಿಸಿದ್ದರು. ಅಲ್ಲದೆ ಶಿವರಾಮ ಕಾರಂತ, ಶ್ರೀನಿವಾಸ ಮಲ್ಯ, ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರಿಗೂ ಚಾಲಕರಾಗಿ ಸೇವೆ ಸಲ್ಲಿಸಿದ್ದರು.




Join Whatsapp