ಮಂಗಳೂರು: ದರೋಡೆಗೆ ಸಂಚು ರೂಪಿಸಿದ್ದ ನಾಲ್ವರು ಅರೆಸ್ಟ್

Prasthutha|

ಮಂಗಳೂರು: ವ್ಯಾಪಾರಸ್ಥರ ದರೋಡೆಗೆ ಸಂಚು ರೂಪಿಸುತ್ತಿದ್ದ ನಾಲ್ವರನ್ನು ನಗರದ ಬಂದರು ಠಾಣೆಯ ಪೊಲೀಸರು ಗುರುವಾರ ಬಂಧಿಸಿದ್ದಾರೆ.

- Advertisement -

ಕುದ್ರೋಳಿ ನಿವಾಸಿ ಅನಿಶ್ ಅಶ್ರಫ್ ಮಾಯಾ (24), ಬಟ್ರಕೆರೆ ಬಜಪೆ ನಿವಾಸಿ ಶೇಖ್ ಮಹಮ್ಮದ್ ಹಾರಿಸ್ ಜಿಗರ್ (32), ಕಸಬ ಬೆಂಗ್ರೆ ನಿವಾಸಿ ಮಹಮ್ಮದ್ ಕೈಸ್ (26) ಮತ್ತು ಕುದ್ರೋಳಿ ನಿವಾಸಿ ಮೊಹಮ್ಮದ್ ಕಾಮಿಲ್ (33) ಬಂಧಿತ ಆರೋಪಿಗಳು.
ಇನ್ನಿಬ್ಬರು ಆರೋಪಿಗಳಾದ ಚೋಟು ಮತ್ತು ಅಬ್ದುಲ್ ಖಾದರ್ ತಲೆ ಮರೆಸಿಕೊಂಡಿದ್ದು, ಪೊಲೀಸರು ಅವರಿಗಾಗಿ ಶೋಧ ನಡೆಸುತ್ತಿದ್ದಾರೆ. ಇವರೆಲ್ಲ ಕುದ್ರೋಳಿ ಮಸೀದಿ ಹಿಂಭಾಗದ ಪರಿಸರದಲ್ಲಿ ಶ್ರೀಮಂತರನ್ನು ದರೋಡೆ ಮಾಡಲಯ ಆರೋಪಿಗಳು ಯತ್ನಿಸುತ್ತಿದ್ದರು ಎನ್ನಲಾಗಿದೆ.


ಜುಲೈ 14ರಂದು ಬಂದರು ಠಾಣೆಯ ಪೊಲೀಸರು ಮೊಯಿದ್ದೀನ್ ಮಸೀದಿ ಹಿಂಭಾಗದ ಖಾಲಿ ಜಾಗಕ್ಕೆ ದಾಳಿ ನಡೆಸಿದ್ದರು. ಈ ವೇಳೆ ಅಲ್ಲಿ ಆರು ಮಂದಿ ಆರೋಪಿಗಳು, ಮೂರು ಮಾರಕಾಯುಧಗಳು ಇದ್ದವು. ಪೊಲೀಸರನ್ನು ನೋಡಿದ ಕೂಡಲೇ ಇಬ್ಬರು ಆರೋಪಿಗಳು ಪರಾರಿಯಾಗಿದ್ದು, ನಾಲ್ವರು ಸಿಕ್ಕಿ ಬಿದ್ದಿದ್ದಾರೆ. ಬಂಧಿತರನ್ನು ವೈದ್ಯಕೀಯ ತಪಾಸಣೆಗೊಳಪಡಿಸಿದಾಗ ಗಾಂಜಾ ಸೇವಿಸಿರುವುದು ಗೊತ್ತಾಗಿದೆ. ನಾಲ್ವರೂ ರೌಡಿ ಶೀಟರ್ ಗಳಾಗಿದ್ದಾರೆ. ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



Join Whatsapp