ಮಂಗಳೂರು: ಜಿಲ್ಲೆಯಲ್ಲಿ ಭಾರೀ ಮಳೆಯ ಪರಿಣಾಮ ವಿಮಾನಗಳ ಸಂಚಾರದಲ್ಲಿಯೂ ವ್ಯತ್ಯಯ ಉಂಟಾಗಿದ್ದು, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಲವು ವಿಮಾನಗಳು ತಡವಾಗಿ ಆಗಮಿಸಿವೆ.
ಬೆಂಗಳೂರಿನಿಂದ 6E 131 ವಿಮಾನವು ಪ್ರತಿಕೂಲ ವಾತಾವರಣದ ಹಿನ್ನೆಲೆಯಲ್ಲಿ ಮಾರ್ಗ ಬದಲಿಸಿದ್ದು, ಬಳಿಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಡವಾಗಿ ಬಂದಿಳಿದಿದೆ. ಹೈದರಾಬಾದ್ ನಿಂದ ಬರಬೇಕಿದ್ದ ವಿಮಾನ ಸಂಖ್ಯೆ 6E 7163 ವಿಮಾನದ ಆಗಮನವೂ ವಿಳಂಬವಾಗಿದೆ. 6E 347 (ಬೆಂಗಳೂರು-ಐಎಕ್ಸ್ ಇ) ವಿಮಾನವು ಏಳು ನಿಮಿಷ ತಡವಾಗಿ ಆಗಮಿಸಿದೆ. 6E 496 ಸಿಸಿಯು-ಬೆಂಗಳೂರು-ಐಎಕ್ಸ್ ಇ ವಿಮಾನವು 16 ನಿಮಿಷ ತಡವಾಗಿ ಬೆಳಗ್ಗೆ 11.36ಕ್ಕೆ ಆಗಮಿಸಿ 50 ನಿಮಿಷ ತಡವಾಗಿ ನಿರ್ಗಮಿಸಿದೆ ಎಂದು ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರವು ತಿಳಿಸಿದೆ.