ಮಂಗಳೂರು: ಆಕಸ್ಮಿಕ ಬೆಂಕಿ ಹತ್ತಿಕೊಂಡು ಗುಜರಿ ಗೋಡಾನ್ ಸಂಪೂರ್ಣ ಭಸ್ಮವಾಗಿರುವ ಘಟನೆ ನಗರದ ಜೆಪ್ಪಿನಮೊಗರು ರಾಷ್ಟ್ರೀಯ ಹೆದ್ದಾರಿಯ ಚಿಂತನೆ ಬಳಿ ನಡೆದಿದೆ.
ವಸತಿ ಪ್ರದೇಶದಲ್ಲಿದ್ದ ಈ ಗೋಡೌನ್‌ನಲ್ಲಿ ಹಳೆಯ ಕಾರುಗಳು, ಇಲೆಕ್ಟ್ರಾನಿಕ್ ವಸ್ತುಗಳು ಸಂಗ್ರಹವಾಗಿದ್ದು, ಕಿಡಿ ಹತ್ತಿಕೊಂಡು ಬೆಂಕಿ ಹರಡಿದೆ ಎಂದು ಶಂಕಿಸಲಾಗಿದೆ.
ಶಾಸಕ ವೇದವ್ಯಾಸ ಕಾಮತ್ ಮತ್ತು ಸ್ಥಳೀಯ ಕಾರ್ಪೋರೇಟರ್‌ಗಳಾದ ವೀಣಮಂಗಳ, ಭರತ್ ಕುಮಾರ್ ಎಸ್ ಮತ್ತು ಶೈಲೇಶ್ ಶೆಟ್ಟಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಭಾಯಿಸಿದ್ದಾರೆ. ಅಗ್ನಿಶಾಮಕ ದಳದ 6 ವಾಹನಗಳು ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದವು.