ಮಂಗಳೂರು: ಪಿಲಿಕುಳ ನಿಸರ್ಗಧಾಮದಲ್ಲಿ ಅಗ್ನಿ ಅನಾಹುತ

Prasthutha|

ಮಂಗಳೂರು: ನಗರದ ಹೊರವಲಯದ ಮೂಡುಶೆಡ್ಡೆ ಸಮೀಪದಲ್ಲಿರುವ ನಿಸರ್ಗಧಾಮದ ಟಿಕೆಟ್ ಕೌಂಟರ್ ಬಳಿ ಅಗ್ನಿ ಅವಘಡ ಸಂಭವಿಸಿದೆ.

- Advertisement -


ಅಗ್ನಿ ಅವಘಡದ ಪರಿಣಾಮ ಟಿಕೆಟ್ ಕೌಂಟರ್ ಸೇರಿ ಎರಡು ಎಲೆಕ್ಟ್ರಿಕ್ ವಾಹನಗಳು ಸುಟ್ಟು ಹೋಗಿವೆ.


ನಿಸರ್ಗಧಾಮದ ವರ್ಕ್ ಶಾಪ್ ನಲ್ಲಿ ಚಾರ್ಜ್ ಗೆ ಹಾಕಿದ್ದ ಒಂದು ಎಲೆಕ್ಟ್ರಿಕ್ ವಾಹನದಲ್ಲಿ ಸ್ಪಾರ್ಕ್ ನಿಂದಾಗಿ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗಿದ್ದು, ಎರಡು ವಾಹನಗಳು ಸಂಪೂರ್ಣವಾಗಿ ಉರಿದು ಹೋಗಿವೆ.

- Advertisement -


ನಿಸರ್ಗಧಾಮದ ಆವರಣದಲ್ಲಿ ಪ್ರವಾಸಿಗರನ್ನು ಕರೆದೊಯ್ಯುವ ಹತ್ತಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳನ್ನು ನಿಲ್ಲಿಸಲಾಗಿತ್ತು ಎನ್ನಲಾಗಿದೆ.
ಸ್ಥಳಕ್ಕೆ ಅಗ್ನಿ ಶಾಮಕ ದಳ ಆಗಮಿಸಲು ವಿಳಂಬವಾದ ಕಾರಣ ನಿಸರ್ಗಧಾಮದ ಸಿಬ್ಬಂದಿಯೇ ಬೆಂಕಿ ನಂದಿಸುವ ಕಾರ್ಯ ನಡೆಸಿದ್ದಾರೆ.




Join Whatsapp