ಮಂಗಳೂರು: ಲೇಡಿಗೋಷನ್ ಆಸ್ಪತ್ರೆಯಲ್ಲಿ ಮಗುವಿಗೆ ಅನ್ಯಾಯ ಆರೋಪ

Prasthutha|

ಉನ್ನತ ಮಟ್ಟದ ತನಿಖೆಗೆ ಜಿಲ್ಲಾಧಿಕಾರಿಗೆ ಮನವಿ

- Advertisement -


ಮಂಗಳೂರು: ಲೇಡಿಗೋಶನ್ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಹೆರಿಗೆಯಾಗಿದ್ದರೂ ಎರಡು ದಿನಗಳ ಕಾಲ ಸೂಕ್ತ ಮಾಹಿತಿ ನೀಡದೆ ವೈದ್ಯಾಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಈ ಮೂಲಕ ತಮ್ಮ ಮಗುವಿಗೆ ಅನ್ಯಾಯವಾಗಿರುವ ಬಗ್ಗೆ ಸಂಶಯವಿದ್ದು, ಈ ಬಗ್ಗೆ ಉನ್ನತ ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಮಗುವಿನ ಪೋಷಕರು ಪೊಲೀಸರಿಗೆ ಹಾಗೂ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.


ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಸಂತ್ರಸ್ತೆಯು ಆ.17ರಂದು ಚೆಕ್ ಅಪ್ ಗಾಗಿ ಬಂಟ್ವಾಳದ ಸರಕಾರಿ ಆಸ್ಪತ್ರೆಗೆ ತೆರಳಿದ್ದರು. ಈ ವೇಳೆ ಆಸ್ಪತ್ರೆಯಲ್ಲಿ ಮಹಿಳಾ ವೈದ್ಯರಿಲ್ಲದ ಕಾರಣ, ಆ.18ರಂದು ಅವರನ್ನು ಮಂಗಳೂರಿನ ಲೇಡಿ ಗೋಶನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬೆಳಗ್ಗೆ 9.50ರ ಸುಮಾರಿಗೆ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈ ವೇಳೆ ಮಗು ನಾರ್ಮಲ್ ಆಗಿದೆ ಎಂದು ತಿಳಿಸಿದ್ದರು. ಉಸಿರಾಟದ ತೊಂದರೆ ಇರುವುದಾಗಿ ಮಗುವನ್ನು ಐಸಿಯುಗೆ ದಾಖಲಿಸಲಾಗಿತ್ತು. ನಂತರ ಮಂಗಳವಾರ ಸಂಜೆ ಮಗುವಿಗೆ ಒಂದು ಕಣ್ಣಿನ ಸಮಸ್ಯೆ ಇರುವುದಾಗಿ ಹೇಳಿದ್ದಾರೆ. ಮೂರು ದಿನ ಕಳೆದರು ಮಗುವನ್ನು ತೋರಿಸಿಲ್ಲ ಇದರಿಂದ ಹೆತ್ತವರಿಗೆ ಆಘಾತವಾಗಿದೆ. ವೈದ್ಯರು ಈ ಬಗ್ಗೆ ಸರಿಯಾದ ಕಾರಣ ನೀಡದೆ ನುಣುಚಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ವೈದ್ಯಕೀಯ ವರದಿಗಳನ್ನು ನೀಡದಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ.

- Advertisement -


‘ಆ. 18ರಂದು ಬೆಳಗ್ಗೆ ನನಗೆ ನಾರ್ಮಲ್ ಹೆರಿಗೆ ಆಗಿತ್ತು. ಮಗು ಅತ್ತಿತ್ತು ಕೂಡಾ. ಹೆರಿಗೆಯಾದಾಗ ವೈದ್ಯರು ಮಗು ನಾರ್ಮಲ್ ಇದೆ ಎಂದಿದ್ದರು. ಬಳಿಕ ಉಸಿರಾಟದ ತೊಂದರೆ ಇರುವ ಕಾರಣ ಎನ್ ಐಸಿಯು ನಲ್ಲಿ ಇರಿಸಲಾಗುತ್ತದೆ ಎಂದು ಹೇಳಿದ್ದರು. ಆದರೆ ಎರಡು ದಿನಗಳ ಬಳಿಕ ಅಂದರೆ ಮಂಗಳವಾರ ಸಂಜೆ ಮಗುವಿನ ಬಲಕಣ್ಣು ಇಲ್ಲ ಎಂದು ಹೇಳುವ ಮೂಲಕ ಆಘಾತ ನೀಡಿದ್ದಾರೆ. ಹೆರಿಗೆಯಾದ ದಿನ ನೋಡಿದ ಮಗುವಿಗೂ, ಎರಡು ದಿನಗಳ ನಂತರ ಮಗುವನ್ನು ನೋಡಿದಾಗ ನನಗೆ ಬದಲಾವಣೆ ಕಂಡು ಬಂದಿದೆ. ಸಹಜ ಹೆರಿಗೆ ಆಗಿ ಮೂರು ದಿನವಾದರೂ ಮಗುವಿಗೆ ಹಾಲುಣಿಸಲೂ ಅವಕಾಶ ನೀಡಲಾಗಿಲ್ಲ’ ಎಂದು ದೂರುದಾರರಾದ ಸಂತ್ರಸ್ತೆ ನೋವು ಹಂಚಿಕೊಂಡಿದ್ದಾರೆ.



Join Whatsapp