ಮಂಗಳೂರು ಸಿಸಿಬಿ ಕಾರ್ಯಾಚರಣೆ: ಗಾಂಜಾ ಮಾರುತ್ತಿದ್ದ 12 ವಿದ್ಯಾರ್ಥಿಗಳ ಬಂಧನ

Prasthutha|

ಮಂಗಳೂರು: ಮಂಗಳೂರು ನಗರದ ಸಾರ್ವಜನಿಕರಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಹಾಗೂ ಗಾಂಜಾವನ್ನು ಹೊಂದಿದ 12 ಮಂದಿ ವಿದ್ಯಾರ್ಥಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

- Advertisement -


ಮಂಗಳೂರು ನಗರದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ನಿಷೇಧಿತ ಮಾದಕ ವಸ್ತುವಾದ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಹಾಗೂ ಸೇವನೆ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ಮತ್ತು ಪಿಎಸ್ ಐ ರಾಜೇಂದ್ರ ಬಿ ರವರ ನೇತೃತ್ವದ ಮಂಗಳೂರು ಸಿಸಿಬಿ ಪೊಲೀಸರು, ಮಂಗಳೂರಿನ ನಗರದ ವೆಲೆನ್ಸಿಯಾ ಸೂಟರ್ ಪೇಟೆ 3 ನೇ ಕ್ರಾಸ್ ನ ವಸತಿಗೃಹವೊಂದಕ್ಕೆ ದಾಳಿ ನಡೆಸಿ ಮಾದಕ ವಸ್ತುವಾದ ಗಾಂಜಾವನ್ನು ಹೊಂದಿದ 12 ಮಂದಿ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.


ಕೇರಳ ಮೂಲದ ಶಾನೂಫ್ ಅಬ್ದುಲ್ ಗಫೂರ್ (21), ಮುಹಮ್ಮದ್ ರಸೀನ್(22), ಗೋಕುಲ ಕೃಷ್ಣನ್ (22), ಶಾರೂನ್ ಆನಂದ(19), ಅನಂತು ಕೆ ಪಿ(18), ಅಮಲ್(21), ಅಭಿಷೇಕ(21), ನಿದಾಲ್(21), ಶಾಹೀದ್ ಎಂ ಟಿ ಪಿ(22), ಫಹಾದ್ ಹಬೀಬ್(22), ಮುಹಮ್ಮದ್ ರಿಶಿನ್(22), ರಿಜಿನ್ ರಿಯಾಝ್(22) ಎಂಬವರನ್ನು ಬಂಧಿಸಲಾಗಿದೆ.

- Advertisement -


ಆರೋಪಿಗಳಿಂದ ಒಟ್ಟು 900 ಗ್ರಾಂ ತೂಕದ ರೂ. 20,000 ಮೌಲ್ಯದ ಗಾಂಜಾ, ಗಾಂಜಾವನ್ನು ಸೇದುವ Smoking Pipes, ರೋಲಿಂಗ್ ಪೇಪರ್ ಹಾಗೂ ನಗದು ರೂ. 4,500 ಹಾಗೂ 11 ಮೊಬೈಲ್ ಫೋನ್ ಗಳನ್ನು, ಡಿಜಿಟಲ್ ತೂಕ ಮಾಪನವನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ರೂ. 2,85,000 ಎಂದು ಅಂದಾಜಿಸಲಾಗಿದೆ. ಈ ಗಾಂಜಾ ಮಾರಾಟ ಜಾಲದಲ್ಲಿ ಇನ್ನೂ ಹಲವು ಯುವಕರು/ವಿದ್ಯಾರ್ಥಿಗಳು ಭಾಗಿಯಾಗಿದ್ದು, ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.



Join Whatsapp