ಮಂಗಳೂರು: ಕಂಕನಾಡಿಯ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದ ಬಳಿ ಮರವೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ.
40-50 ವರ್ಷ ವಯೋಮಿತಿಯ ಈ ವ್ಯಕ್ತಿ 5.5 ಅಡಿ ಎತ್ತರ, ಎಣ್ಣೆ ಕಪ್ಪು ಮೈಬಣ್ಣ, ತೆಳ್ಳಗೆ ಮೈಕಟ್ಟು, ಅಲ್ಪ ಸ್ವಲ್ಪ ನೆರೆತ ತಿಳಿ ಗಡ್ಡ, ಮೀಸೆ ಹೊಂದಿದ್ದಾರೆ.
ಮೃತ ದೇಹವನ್ನು ನಗರದ ವೆನ್ಲಾಕ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಪೊಲೀಸ್ ಇಲಾಖೆಯ ಪ್ರಕಟಣೆಯ ಪ್ರಕಾರ ವಾರೀಸುದಾರರು ಅಥವಾ ಸಂಬಂಧಿಕರು ಇದ್ದಲ್ಲಿ ಕಂಕನಾಡಿ ಪೊಲೀಸ್ ಠಾಣೆಯನ್ನು 0824-2220529 ಗೆ ಸಂಪರ್ಕಿಸಬಹುದಾಗಿದೆ.