ಮಂಗಳೂರು: ಬೆಂಗರೆಯಲ್ಲಿ ಲಂಗರು ಹಾಕಿದ್ದ ಬೋಟ್ ಗಳು ಬೆಂಕಿಗಾಹುತಿ

Prasthutha|

ಮಂಗಳೂರು: ನಗರದ ಬೆಂಗ್ರೆ ಪ್ರದೇಶದಲ್ಲಿ ಲಂಗರು ಹಾಕಿದ್ದ 3ಕ್ಕೂ ಅಧಿಕ ಬೋಟ್ ಗಳು ಬೆಂಕಿಗಾಹುತಿಯಾದ ಘಟನೆ ಶುಕ್ರವಾರ ಸಂಜೆ ನಡೆದಿದೆ.

- Advertisement -


ಬೆಂಗರೆಯಲ್ಲಿ ಹಲವು ಬೋಟ್ ಗಳು ಲಂಗರು ಹಾಕಿರುತ್ತವೆ. ಈ ಪೈಕಿ ಒಂದು ಬೋಟ್ ನಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಆ ಬೆಂಕಿ ಹತ್ತಿರಲ್ಲಿದ್ದ ಇತರ ಬೋಟ್ ಗಳಿಗೂ ಹಬ್ಬಿದ್ದು, ಇಡೀ ಪ್ರದೇಶದಲ್ಲಿ ದಟ್ಟವಾದ ಹೊಗೆ ಆವರಿಸಿರುವುದು ಕಂಡುಬಂದಿದೆ.


ವಿಷಯ ತಿಳಿದ ತಕ್ಷಣ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

- Advertisement -

ಬೆಂಗರೆ ಸಮೀಪದ ರಾತೀಬ್ ಕೊಟ್ಟಿಗೆ ಮಸೀದಿಯ ಬಳಿ ಲಂಗರು ಹಾಕಿದ್ದ ಮೂರು ಬೋಟ್ ಗಳು ಬೆಂಕಿಗಾಹುತಿಯಾಗಿವೆ. ಈ ಬೋಟ್ ಗಳು ಲಕ್ಷದ್ವೀಪದ ಉದ್ಯಮಿಗಳಿಗೆ ಸೇರಿದ್ದು ಎಂದು ತಿಳಿದುಬಂದಿದೆ.



Join Whatsapp