ಮಂಗಳೂರು: ಟೊಮೆಟೊ ಬಳಿಕ ಈರುಳ್ಳಿ ಬೆಲೆ ಭಾರಿ ಏರಿಕೆ

Prasthutha|

ಮಂಗಳೂರು: ಟೊಮೆಟೊ ದರ ಕ್ರಮೇಣ ಇಳಿಮುಖವಾಗುತ್ತಿರುವಂತೆಯೇ ಇದೀಗ ಈರುಳ್ಳಿ ದರ ಭಾರೀ ಏರಿಕೆಯಾಗಿದೆ.

- Advertisement -


ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈರುಳ್ಳಿ ಬೆಲೆ ಗಣನೀಯವಾಗಿ ಹೆಚ್ಚಳವಾಗಿದೆ.


ಮಂಗಳೂರಿನಲ್ಲಿ ಕಳೆದ ಎರಡು ವಾರಗಳಿಂದ ಈರುಳ್ಳಿ ಬೆಲೆ ನಿರಂತರವಾಗಿ ಏರಿಕೆಯಾಗಿದೆ. ಕಳೆದ ವಾರ ಕ್ವಿಂಟಲ್ ಗೆ 2000 ರೂ.ಗೆ ತಲುಪಿತ್ತು. ಇದೀಗ 2900 ರೂ. ದಾಟಿದೆ. ಕಳೆದ ವಾರ 26 ರೂ.ಗೆ ಮಾರಾಟವಾಗುತ್ತಿದ್ದ ಒಂದು ಕಿಲೋ ಈರುಳ್ಳಿ ಇದೀಗ 34 ರಿಂದ 35 ರೂ.ಗೆ ಮಾರಾಟವಾಗುತ್ತಿದೆ.

- Advertisement -


ನಾಸಿಕ್ ನ ರೈತರು ಕೃಷಿ ಚಟುವಟಿಕೆಯಲ್ಲಿ ನಿರತರಾಗಿರುವ ಕಾರಣ, ಮಾರುಕಟ್ಟೆಯಲ್ಲಿ ಈರುಳ್ಳಿ ಪೂರೈಕೆ ಕಡಿಮೆಯಾಗಿದೆ. ಇದು ಬೆಲೆ ಏರಿಕೆಗೆ ಕಾರಣವಾಗಿದೆ. ಈ ಹಿಂದೆ ನಾಸಿಕ್ ಮಾರುಕಟ್ಟೆಯಿಂದ 25 ಸಾವಿರದಿಂದ 30 ಸಾವಿರ ಕ್ವಿಂಟಲ್ ಈರುಳ್ಳಿ ಪೂರೈಕೆಯಾಗುತ್ತಿತ್ತು. ಈಗ ಅದು 10,000 ಕ್ವಿಂಟಲ್ ಗೆ ಇಳಿಕೆಯಾಗಿದೆ.



Join Whatsapp