ಮಂಗಳೂರು: ಲಂಚ ಪಡೆದ ಆರೋಪ; ಭೂಮಾಪನ ಇಲಾಖೆಯ ಅಧಿಕಾರಿಗೆ ಜೈಲು

Prasthutha|

ಪುತ್ತೂರು: ಲಂಚ ಪಡೆದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ಪುತ್ತೂರು ಭೂಮಾಪನ ಇಲಾಖೆಯ ಭೂಮಾಪಕ ಮಹಾದೇವ ನಾಯಕ್‌ಗೆ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ.

- Advertisement -


ಆರೋಪಿ ಮಹಾದೇವ ನಾಯಕ್‌ ಲಂಚಕ್ಕೆ ಬೇಡಿಕೆ ಇಟ್ಟಿರುವುದು ನ್ಯಾಯಾಲಯದಲ್ಲಿ ಸಾಬೀತಾಗಿದ್ದು, 3.3 ವರ್ಷ ಜೈಲು ಹಾಗೂ 20 ಸಾವಿರ ರೂ. ದಂಡ ಎಧಿಸಿ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಜಿ.ಬಿ.ಜಕಾಶಿ ತೀರ್ಪು ನೀಡಿದ್ದಾರೆ.


ಆರ್ಯಾಪು ಗ್ರಾಮದ ವ್ಯಕ್ತಿಯೊಬ್ಬರ ಜಮೀನಿನ ಅಳತೆ ಮಾಡಿ ನಕ್ಷೆ ತಯಾರಿಸಿ ಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬಗ್ಗೆ 2014ಮಾರ್ಚ್‌ 15ರಂದು ಲೋಕಾಯುಕ್ತ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಲೋಕಾಯುಕ್ತದಲ್ಲಿ ಅಂದಿನ ಇನ್‌ಸ್ಪೆಕ್ಟರ್‌, ಹಾಲಿ ಕಾರ್ಕಳ ಉಪ ವಿಭಾಗದ ಡಿವೈಎಸ್ಪಿ ಆಗಿರುವ ಎಸ್‌. ವಿಜಯ ಪ್ರಸಾದ್‌ ಈ ಪ್ರಕರಣದ ತನಿಖೆ ನಡೆಸಿ, ಲೋಕಾಯುಕ್ತಕ್ಕೆ ದೋಷಾರೋಪಣಾ ಪಟ್ಟಿಸಲ್ಲಿಸಿದ್ದರು. ವಿಶೇಷ ಸಾರ್ವಜನಿಕ ಅಭಿಯೋಜಕ ರವೀಂದ್ರ ಮುನ್ನಿಪಾಡಿ ಸರ್ಕಾರದ ಪರ ವಾದಿಸಿದ್ದರು.

Join Whatsapp