ಮಂಗಳೂರು: ಅಪಾರ್ಟ್‌ಮೆಂಟ್‌ನ 9ನೇ ಮಹಡಿಯಿಂದ ಕೆಳಗೆ ಬಿದ್ದು ಎಸಿ ಟೆಕ್ನೀಶಿಯನ್ ಮೃತ್ಯು

Prasthutha|

ಮಂಗಳೂರು: ಅಪಾರ್ಟ್‌ಮೆಂಟ್‌ನ ಮಹಡಿಯಿಂದ ಕೆಳಗೆ ಬಿದ್ದು ಎಸಿ ಟೆಕ್ನೀಶಿಯನ್ ದಾರುಣವಾಗಿ ಮೃತಪಟ್ಟ ಘಟನೆ ಇಂದು(ಬುಧವಾರ) ಸಂಜೆ ನಂತೂರಿನಲ್ಲಿ ನಡೆದಿದೆ.

- Advertisement -

ವಿನಯ್ ಜೋಯೆಲ್ ತಾವ್ರೋ (22) ಮೃತಪಟ್ಟ ಎಸಿ ಟೆಕ್ನೀಶಿಯನ್.

ವಿನಯ್ ಜೋಯೆಲ್ ತಾವ್ರೋ ಅವರು ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಆಯ ತಪ್ಪಿ ಅಪಾರ್ಟ್‌ಮೆಂಟ್‌ನಿಂದ ಬಿದ್ದು ಮೃತಪಟ್ಟಿದ್ದಾರೆ.

- Advertisement -

ಸಂಜೆ ಸುಮಾರು 5.58ರ ವೇಳೆಗೆ ನಂತೂರು ಬಳಿಯಿರುವ ಮೌಂಟ್ ಟಿಯರಾ ಅಪಾರ್ಟ್‌ಮೆಂಟ್‌ನ ಒಂಬತ್ತನೇ ಮಹಡಿಯ ಕಿಟಕಿಯಿಂದ ಹೊರಬಂದು ಸ್ಕ್ರೂ ಹಾಕುವಾಗ ಅಚಾನಕವಾಗಿ ಆಯತಪ್ಪಿ ಬಿದ್ದು ವಿನಯ್ ಜೋಯೆಲ್ ತಾವ್ರೋ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತದೇಹವನ್ನು ಎ ಜೆ ಆಸ್ಪತ್ರೆ ಶವಾಗಾರದಲ್ಲಿ ಇರಿಸಲಾಗಿದ್ದು, ಮೃತನ ಮನೆಯವರು ಬಂದ ಕೂಡಲೇ ಕ್ರಮ ಕೈಗೊಳ್ಳಲಾಗುವುದು

Join Whatsapp