ಮಂಗಳೂರು: ಫುಟ್ ಪಾತ್ ನಲ್ಲಿ ತ್ಯಾಜ್ಯ ಎಸೆದವನಿಗೆ ಪಾಲಿಕೆಯಿಂದ 4 ಸಾವಿರ ರೂ. ದಂಡ

Prasthutha|

ಮಂಗಳೂರು: ಫುಟ್ ಪಾತ್ ನಲ್ಲಿ ತ್ಯಾಜ್ಯವನ್ನು ಎಸೆದ ಪ್ರಕರಣದಲ್ಲಿ ಮಂಗಳೂರು ಮಹಾನಗರ ಪಾಲಿಕೆ ದಂಡ ವಿಧಿಸಿದೆ.

- Advertisement -


ನಗರದ ಮಣ್ಣಗುಡ್ಡ ಪ್ರದೇಶದಲ್ಲಿ ವ್ಯಕ್ತಿಯೊಬ್ಬರು ಕಟ್ಟಡ ತ್ಯಾಜ್ಯವನ್ನು ಫುಟ್ ಪಾತ್ ನಲ್ಲಿ ಹಾಕಿದ ಕಾರಣ ಸ್ವಚ್ಛತಾ ದರ ಎಂದು ಮಂಗಳೂರು ಮಹಾನಗರ ಪಾಲಿಕೆ ರೂ. 4 ಸಾವಿರ ದಂಡ ವಸೂಲು ಮಾಡಿದೆ.


ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ರಾಶಿ ಹಾಕಿರುವವರ ಮೇಲೆ ಘನತ್ಯಾಜ್ಯ ನಿರ್ವಹಣೆ ಉಪವಿಧಿ ಉಲ್ಲಂಘನೆ ಪ್ರಕರಣದಡಿ 4,000 ರೂ.ಗಳ ದಂಡ ವಿಧಿಸಿ, ಮೊತ್ತ ವಸೂಲಿ ಮಾಡಿದೆ.



Join Whatsapp