ಮಂಗಳೂರು | ಅಪಾರ್ಟ್ ಮೆಂಟ್ ನಲ್ಲಿ ಆಕಸ್ಮಿಕ ಬೆಂಕಿ: ಮಹಿಳೆ ಮೃತ್ಯು

Prasthutha|

ಮಂಗಳೂರು: ಫ್ಲ್ಯಾಟ್ ನಲ್ಲಿ ನಡೆದ ಆಕಸ್ಮಿಕ ಬೆಂಕಿ ಅವಘಡದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ನಗರದ ಅತ್ತಾವರದಲ್ಲಿ ನಡೆದಿದೆ.

- Advertisement -


ಸಹೈನ್ ಮುಸಾಬ್ (57) ಮೃತಪಟ್ಟ ಮಹಿಳೆ ಎಂದು ತಿಳಿದು ಬಂದಿದೆ.


ಬೆಳ್ಳಂಬೆಳಗ್ಗೆ ಶಾರ್ಟ್ ಸರ್ಕ್ಯೂಟ್ ನಿಂದ ಈ ಅವಘಡ ಸಂಭವಿಸಿದ್ದು, ಮನೆಯಲ್ಲಿದ್ದ ಇತರರು ಹೊರ ಬಂದಿದ್ದರು. ಆದರೆ ಮುಸಾಬ್ ಶೌಚಾಲಯದೊಳಗಿದ್ದ ಕಾರಣ ಹೊರಬರಲಾಗದೇ ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಯಿತು. ಅದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.

Join Whatsapp