ಮಂಗಳೂರು ವಿವಿ: ABVP ನಾಯಕನ ವಿರುದ್ಧದ ಪ್ರತಿಭಟನೆಗೆ ಹಿಜಾಬ್ ‘ಟೂಲ್’ ಪ್ರಯೋಗ

Prasthutha|

►ನಮಗೆ ಹಿಜಾಬ್ ಸಮಸ್ಯೆಯಲ್ಲ ,ಆದರೆ ನಾವೇ ಆಯ್ಕೆ ಮಾಡಿದ ನಮ್ಮ ಅಧ್ಯಕ್ಷ ನಮಗೆ ಸ್ಪಂದಿಸುತ್ತಿಲ್ಲ ಎಂದು ಕಾರ್ಯಕರ್ತರು

- Advertisement -

ಮಂಗಳೂರು : ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿಯೊಬ್ಬಳು ಶಿರವಸ್ತ್ರ ಧರಿಸಿ ಬಂದುದ್ದನ್ನು ವಿರೋಧಿಸಿ ತರಗತಿ ಬಹಿಷ್ಕರಿಸಿದ ಘಟನೆಗೆ ಇಂದು ಹೊಸ ತಿರುವು ದೊರಕಿದೆ. ತಾವೇ ಆಯ್ಕೆ ಮಾಡಿದ ನಾಯಕನ ಮೇಲಿನ ಅಸಮಾಧಾನವನ್ನು ವ್ಯಕ್ತಪಡಿಸುವ ಮತ್ತು ಆತನನ್ನು ಹುದ್ದೆಯಿಂದ ಕೆಳಗಿಳಿಸುವ ಸಲುವಾಗಿ ಎಬಿವಿಪಿ ಕಾರ್ಯಕರ್ತರು ಹಿಜಾಬನ್ನು ಟೂಲ್ ಆಗಿ ಬಳಸಿಕೊಂಡಿದ್ದಾರೆ ಎಂಬ ಸತ್ಯ ಬೆಳಕಿಗೆ ಬಂದಿದೆ.

ವಿವಿಯಲ್ಲಿ  ಎರಡು ತಿಂಗಳು ಹಿಂದೆ ವಿದ್ಯಾರ್ಥಿ ಸಂಘದ ಚುನಾವಣೆ ನಡೆದಿದ್ದು ಎಬಿವಿಪಿ ಬೆಂಬಲಿತ ವಿದ್ಯಾರ್ಥಿಯೊಬ್ಬ ಕಾಲೇಜು ಯೂನಿಯನ್ ಅಧ್ಯಕ್ಷನಾಗಿ ಆಯ್ಕೆಯಾಗಿದ್ದನು. ಆದರೆ ಆತ ಇತ್ತೀಚೆಗೆ ಎಬಿವಿಪಿ ಕಾರ್ಯಕರ್ತರ ಕೋಮುಪ್ರೇರಿತ ನಿಲುವಿಗೆ ಸ್ಪಂದಿಸುತ್ತಿರಲಿಲ್ಲ ಎನ್ನಲಾಗಿದೆ.

- Advertisement -

 ಈ ಹಿನ್ನೆಲೆಯಲ್ಲಿ ಆತನನ್ನು ಅಧ್ಯಕ್ಷ ಗಾದಿಯಿಂದ ಕೆಳಗಿಳಿಸಬೇಕೆಂದು ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ. ಇದೇ ನೆಪದಲ್ಲಿ  ಹಿಜಾಬನ್ನು ಟೂಲ್ ಆಗಿ ಬಳಸಿಕೊಳ್ಳುತ್ತಿದ್ದಾರೆ ಎಂಬುವುದು ಸ್ಪಷ್ಟವಾಗಿದ್ದು ಅದನ್ನು ಮಾಧ್ಯಮದ ಮುಂದೆ ಸ್ವತ ಕಾರ್ಯಕರ್ತರೇ ಒಪ್ಪಿಕೊಂಡಿದ್ದಾರೆ.

ನಮಗೆ ಹಿಜಾಬ್ ಸಮಸ್ಯೆಯಲ್ಲ ,ಆದರೆ ನಾವೇ ಆಯ್ಕೆ ಮಾಡಿದ ನಮ್ಮ ಅಧ್ಯಕ್ಷ ನಮಗೆ ಸ್ಪಂದಿಸುತ್ತಿಲ್ಲ ಆದ್ದರಿಂದ ಅವನನ್ನು ಅಧ್ಯಕ್ಷ ಸ್ಥಾನದಿಂದ ತುರ್ತಾಗಿ ಕೆಳಗಿಳಿಸಬೇಕು ಎಂದು ವಿದ್ಯಾರ್ಥಿಗಳು ಹೇಳಿದ್ದು ಇಲ್ಲಿ ಹಿಜಾಬ್ ಸಮಸ್ಯೆಯೇ ಅಲ್ಲ ಎಂಬುವುದು ಸ್ಪಷ್ಟವಾಗಿದೆ.



Join Whatsapp