ಮಂಗಳೂರು: ನಗರದಲ್ಲಿ ರಾತ್ರಿ ಧಾರಾಕಾರ ಮಳೆಯಾಗಿದ್ದು, ಕರಂಗಲ್ಪಾಡಿಯ ಕೋರ್ಟ್ ರಸ್ತೆಯ ಬಳಿ ಮರದ ಕೊಂಬೆ ತುಂಡಾಗಿ, ಕಾರುಗಳ ಮೇಲೆ ಬಿದ್ದು ನಿಲ್ಲಿಸಿದ್ದ ಎರಡು ಕಾರುಗಳು ಜಖಂಗೊಂಡಿವೆ.ಘಟನೆ ನಡೆದಾಗ ಸ್ಥಳದಲ್ಲಿ ಯಾರೂ ಇರಲಿಲ್ಲ.
ಮರದ ಕೊಂಬೆಯಡಿ ಸಿಲುಕಿ ವಿದ್ಯುತ್ ತಂತಿಗಳೂ ತುಂಡಾಗಿದ್ದು, ಮೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಉರುಳಿ ಬಿದ್ದ ಮರದ ಕೊಂಬೆಯನ್ನು ತೆರವುಗೊಳಿಸಿ ಅನಾಹುತ ತಪ್ಪಿಸಿದ್ದಾರೆ.