ಮಂಗಳೂರು: ಪಣಂಬೂರು ಬೀಚ್‌ನಲ್ಲಿ ಮೂವರು ಯುವಕರು ನೀರುಪಾಲು

Prasthutha|

ಮಂಗಳೂರು: ಪಣಂಬೂರು ಬೀಚ್‌‌ಗೆ ಕುಟುಂಬ ಸಮೇತ ತೆರಳಿದ್ದ ಮೂವರು ಯುವಕರು ನೀರುಪಾಲಾಗಿರುವ ಘಟನೆ ನಡೆದಿದೆ. ಮಿಲನ್(20), ಲಿಖಿತ್(18), ನಾಗರಾಜ್(24) ಮೃತ ಯುವಕರು.

- Advertisement -

ಮೀನುಗಾರರು ಹಾಗೂ ಜೀವರಕ್ಷಕ ದಳದಿಂದ ಶೋಧ ಕಾರ್ಯ ನಡೆದಿದೆ. ಪಣಂಬೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಿಲನ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದನು. ಲಿಖಿತ್ ಕೈಕಂಬದ ಖಾಸಗಿ ಕಾಲೇಜಿನ ಪಿಯುಸಿ ವಿದ್ಯಾರ್ಥ. ನಾಗರಾಜ್ ಕಂಪನಿಯೊಂದರಲ್ಲಿ ಸೂಪರ್‌ವೈಸರ್ ಆಗಿದ್ದನು.

Join Whatsapp