ಮಂಗಳೂರು: ಜಲೀಲ್, ನೌಶೀನ್ ಹುತಾತ್ಮತೆಗೆ ಮೂರು ವರ್ಷ| ಟ್ವಿಟ್ಟರ್ ಅಭಿಯಾನ

Prasthutha|

ಮಂಗಳೂರು: ಇಲ್ಲಿನ ಅಝೀಝುದ್ದೀನ್ ರಸ್ತೆಯಲ್ಲಿ ಜಲೀಲ್ ಮತ್ತು ನೌಶೀನ್ ಎಂಬ ಯುವಕರು ಪೊಲೀಸ್ ಗೋಲಿಬಾರ್ ಗೆ ಬಲಿಯಾಗಿ ಇಂದಿಗೆ(ಸೋಮವಾರ) ಮೂರು ವರ್ಷ ಸಂದಿದೆ. ಈ ಹಿನ್ನೆಲೆಯಲ್ಲಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(SDPI) ಟ್ವಿಟ್ಟರ್ ಅಭಿಯಾನ ಹಮ್ಮಿಕೊಂಡಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

- Advertisement -

ಅನೇಕ ಟ್ವಿಟ್ಟರ್ ಬಳಕೆದಾರರು ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, #MangaloreGolibarBrutality #3YearsOfMartyrdom ಹ್ಯಾಷ್ ಟ್ಯಾಗ್ ಭಾರೀ ಟ್ರೆಂಡಿಂಗ್ ಆಗಿದೆ.

ಹಲವರು ಟ್ವೀಟ್ ಮಾಡಿ, ಸರಕಾರಿ ಪ್ರಾಯೋಜಿತ ಕಗ್ಗೊಲೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.

- Advertisement -

2019ರ ಡಿ.19 ರಂದು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ನಡೆಸಿದ ಪೊಲೀಸ್ ಗೋಲಿಬಾರ್ ನಲ್ಲಿ ಮಂಗಳೂರಿನ ಬಂದರ್ ಕಂದಕ್ ಮೂಲದ ಜಲೀಲ್ ಮತ್ತು ಕುದ್ರೋಳಿಯ ನೌಶೀನ್ ಎಂಬ ಅಮಾಯಕ ಯುವಕರು ಬಲಿಯಾಗಿದ್ದರು.



Join Whatsapp