ಮಂಗಳೂರು | ಬಂದರ್ ನಲ್ಲಿ ರಸ್ತೆ ಅಪಘಾತ: ಶಿಕ್ಷಕಿ ಮೃತ್ಯು

Prasthutha|

ಮಂಗಳೂರು: ಬಂದರ್ ಧಕ್ಕೆಯಲ್ಲಿ ಅಪಘಾತ ಸಂಭವಿಸಿ ಶಿಕ್ಷಕಿಯೊಬ್ಬರು ಮೃತಪಟ್ಟ ಘಟನೆ ಇಂದು ಬೆಳಗ್ಗೆ ನಡೆದಿದೆ.

- Advertisement -


ನಗರದ ಬೆಂಗರೆಯ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಶಾಹಿದಾ ಮೃತಪಟ್ಟವರು. ಇವರ ಪತಿ ಪೊಲೀಸ್ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದಾರೆ ಎಂದು ತಿಳಿದು ಬಂದಿದೆ.


ಶುಕ್ರವಾರ ಶಾಹಿದಾ ಅವರು ದ್ವಿಚಕ್ರ ವಾಹನದಲ್ಲಿ ಶಾಲೆಗೆ ತೆರಳುತ್ತಿದ್ದಾಗ ಕಾರೊಂದು ಢಿಕ್ಕಿ ಹೊಡೆಯಿತು ಎಂದು ತಿಳಿದು ಬಂದಿದೆ.



Join Whatsapp