ಮಂಗಳೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ವತಿಯಿಂದ 10 ರಿಂದ 17ವರ್ಷ ವಯೋಮಿತಿಯ ಶಾಲಾ-ಕಾಲೇಜಿನ ವಿದ್ಯಾರ್ಥಿಗಳಿಗೆ ಜಲ ಸಾಹಸ, ಭೂ ಸಾಹಸ ಹಾಗೂ ವಾಯು ಸಾಹಸ ಕ್ರೀಡೆಗಳಲ್ಲಿ ಸಾಹಸಮಯ ಬೇಸಿಗೆ ಶಿಬಿರವನ್ನು 2024ರ ಏಪ್ರಿಲ್ ಮತ್ತು ಮೇ ಮಾಹೆಯಲ್ಲಿ ಆಯೋಜಿಸಲಾಗುತ್ತಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಾಹಸಮಯ ಬೇಸಿಗೆ ತರಬೇತಿ ಶಿಬಿರದ ಕುರಿತು ಆನ್‍ಲೈನ್ ಮೂಲಕ ನೋಂದಾಯಿಸಲು ಹಾಗೂ ಹೆಚ್ಚಿನ ಮಾಹಿತಿಯನ್ನು ವೆಬ್‍ಸೈಟ್ ಮೂಲಕ ಪಡೆಯಬಹುದು ಹಾಗೂ ಸಹಾಯವಾಣಿ ಸಂಖ್ಯೆ: 1800 4251 448 ಅನ್ನು ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.