ಮಂಗಳೂರಿನಲ್ಲಿ ಸಾವರ್ಕರ್, ಗಾಂಧಿ ಹಂತಕ ಗೋಡ್ಸೆ ಫೋಟೋ ಪ್ರತ್ಯಕ್ಷ: ವ್ಯಾಪಕ ಆಕ್ರೋಶ

Prasthutha|


ಕೊಲೆಗಾರನನ್ನು ಆರಾಧಿಸುವುದು, ಕೊಲೆಗಡುಕರ ಸಂಸ್ಕೃತಿ..! – ಬಿ.ಕೆ.ಹರಿಪ್ರಸಾದ್

- Advertisement -

ಮಂಗಳೂರು: ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದ ಸಾವರ್ಕರ್ ಬಳಿಕ ಇದೀಗ ಭಾರತದ ಮೊದಲ ಭಯೋತ್ಪಾದಕ ಗೋಡ್ಸೆ ಫೋಟೋ ಪ್ರತ್ಯಕ್ಷವಾಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದ ನಕಲಿ ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್ ಜತೆ ಭಾರತದ ಮೊದಲ ಭಯೋತ್ಪಾದಕ ಗೋಡ್ಸೆ ಫೋಟೋ ಶ್ರೀಕೃಷ್ಣಜನ್ಮಾಷ್ಟಮಿಗೆ ಶುಭ ಕೋರುವ ಫ್ಲೆಕ್ಸ್ ನಲ್ಲಿ ಹಾಕಲಾಗಿದೆ.
ಹಿಂದೂ ಮಹಾಸಭಾ ಹೆಸರಿನಲ್ಲಿ ಮಂಗಳೂರಿನ ಹಲವೆಡೆ ಫ್ಲೆಕ್ಸ್ ಹಾಕಲಾಗಿದ್ದು, ಸುರತ್ಕಲ್, ಬೈಕಂಪಾಡಿ, ಕೂಳೂರು ಭಾಗದಲ್ಲಿ ಬ್ಯಾನರ್ ಅಳವಡಿಸಲಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಕೊಲೆಗಾರನನ್ನು ಆರಾಧಿಸುವುದು, ಕೊಲೆಗಡುಕರ ಸಂಸ್ಕೃತಿ..! ಮಹಾತ್ಮ ಗಾಂಧಿಯ ಕೊಲೆಗಾರ ಗೋಡ್ಸೆಯ ಆರಾಧಕರು ಬಹಿರಂಗವಾಗಿ ಫ್ಲೆಕ್ಸ್ ಹಾಕಲು ಒಪ್ಪಿಗೆ ನೀಡಿದವರಾರು? ಮಂಗಳೂರು ಪೊಲೀಸ್ ಕಮಿಷನರ್ ಕೂಡಲೇ ದುಷ್ಕೃರ್ಮಿಗಳ ವಿರುದ್ಧ ದೂರು ದಾಖಲಿಸಿ. ಫ್ಲೆಕ್ಸ್ ನೆಪದಲ್ಲಿ ಅಶಾಂತಿ ಸೃಷ್ಟಿಸಲು ಹೊಂಚು ಹಾಕುತ್ತಿರುವವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಅಲ್ಲದೆ, ಸಾರ್ವಜನಿಕ ವಲಯದಲ್ಲೂ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Join Whatsapp