ಮಂಗಳೂರು ಆಟೋದಲ್ಲಿ ಸ್ಫೋಟ ಪ್ರಕರಣ: ಇದೊಂದು ಉಗ್ರ ಕೃತ್ಯ ಎಂದ ಡಿಜಿಪಿ ಪ್ರವೀಣ್ ಸೂದ್

Prasthutha|

- Advertisement -

ಮಂಗಳೂರು: ಆಟೋ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಜಿಪಿ ಪ್ರವೀಣ್ ಸೂದ್ ಟ್ವೀಟ್ ಮಾಡಿದ್ದು, ಇದೊಂದು ಉಗ್ರ ಕೃತ್ಯ ಎಂದು ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಇದು ಅನಿರೀಕ್ಷಿತವಾಗಿ ನಡೆದ ಸ್ಫೋಟವಲ್ಲ. ಇದೊಂದು ಉಗ್ರ ಕೃತ್ಯ. ಉದ್ದೇಶಪೂರ್ವಕವಾಗಿ ಸಾವು ನೋವು, ಹಾನಿ ಉಂಟು ಮಾಡಲು ಮಾಡಿದ್ದ ಪ್ಲಾನ್ ಎಂದು ಹೇಳಿದ್ದಾರೆ

- Advertisement -

ಕರ್ನಾಟಕ ಪೊಲೀಸರಿಂದ ಸೂಕ್ಷ್ಮವಾಗಿ, ಆಳವಾಗಿ ತನಿಖೆ ನಡೆಸಲಾಗುತ್ತಿದೆ. ಕೇಂದ್ರದ ತನಿಖಾ ಸಂಸ್ಥೆಗಳ ಜೊತೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ನಿನ್ನೆ ಸಂಜೆ 5:30ರ ಸುಮಾರಿಗೆ ಗರೋಡಿ ಬಳಿ ಚಲಿಸುತ್ತಿದ್ದ ಆಟೋರಿಕ್ಷಾದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಪರಿಣಾಮ ಅದರ ಚಾಲಕ ಮತ್ತು ಪ್ರಯಾಣಿಕ ತೀವ್ರವಾಗಿ ಗಾಯಗೊಂಡಿದ್ದರು. ಪ್ರಯಾಣಿಕನ ಬ್ಯಾಗಿನಲ್ಲಿ ಇದ್ದ ವಸ್ತುವಿನಿಂದ ಬೆಂಕಿ ಕಾಣಿಸಿದೆ ಎಂದು ಎಂದು ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ನಿನ್ನೆ ತಿಳಿಸಿದ್ದರು. ಇದೀಗ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಅವರು, ಇದು ಉಗ್ರ ಕೃತ್ಯವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.



Join Whatsapp