ಮಂಗಳೂರು | ಪಬ್ಬಾಸ್’ನಲ್ಲಿ ಐಸ್ ಕ್ರೀಂ ಸವಿದ ರಾಹುಲ್ ಗಾಂಧಿ: ಸೆಲ್ಫಿಗೆ ಮುಗಿಬಿದ್ದ ಜನ

Prasthutha|

ಮಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಕರಾವಳಿ ಪ್ರವಾಸದಲ್ಲಿದ್ದ ರಾಹುಲ್ ಗಾಂಧಿ ಗುರುವಾರ ರಾತ್ರಿ ಮಂಗಳೂರು ಪಬ್ಬಾಸ್ ಐಸ್ ಕ್ರೀಂ ಪಾರ್ಲರ್ನಲ್ಲಿ ಐಸ್ ಕ್ರೀಂ ಸವಿದರು.

- Advertisement -


ಉಡುಪಿಯಲ್ಲಿ ನಡೆದ ಕಾರ್ಯಕ್ರಮ ಮುಗಿಸಿ ಮಂಗಳೂರಿಗೆ ಆಗಮಿಸಿದ್ದ ರಾಹುಲ್ ಗಾಂಧಿ ನಗರದ ಹೊರವಲಯದ ಅಡ್ಯಾರ್ ನಲ್ಲಿ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಮೈದಾನದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗಿಯಾಗಿದ್ದರು. ಬಳಿಕ ರಾತ್ರಿ ಪಬ್ಬಾಸ್ ಐಸ್ ಕ್ರೀಂ ಪಾರ್ಲರ್ ಗೆ ಭೇಟಿ ನೀಡಿದ್ದರು.


ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಕಾಂಗ್ರೆಸ್ ಮುಖಂಡರಾದ ಕೆ ಸಿ ವೇಣುಗೋಪಾಲ್ ಸೇರಿದಂತೆ ಇತರ ಕಾಂಗ್ರೆಸ್ ಮುಖಂಡರು ರಾಹುಲ್ ಗಾಂಧಿ ಜೊತೆ ಐಸ್ ಕ್ರೀಂ ಸವಿದರು.

- Advertisement -


ಐಸ್ ಕ್ರೀಮ್ ಪಾರ್ಲರ್ ಗೆ ಆಗಮಿಸಿದ್ದ ರಾಹುಲ್ ಗಾಂಧಿಯೊಂದಿಗೆ ಗ್ರಾಹಕರು ಸೆಲ್ಫಿಗೆ ಮುಗಿಬಿದ್ದರು. ಜನರ ಸೆಲ್ಫಿಗೆ ರಾಹುಲ್ ಗಾಂಧಿ ಸಹಕರಿಸಿದರು.
ನಿನ್ನೆ ರಾತ್ರಿ ಮಂಗಳೂರಿನಲ್ಲಿ ವಾಸ್ತವ್ಯ ಇದ್ದ ರಾಹುಲ್ ಗಾಂಧಿ ಇಂದು ಬೆಳಗ್ಗೆ ತೆರಳಿದ್ದಾರೆ.

Join Whatsapp