ಮಂಗಳೂರು | ಮತದಾನೋತ್ತರ ಘರ್ಷಣೆ: ಐದು FIR ದಾಖಲು, ಆರೋಪಿಗಳು ನಾಪತ್ತೆ

Prasthutha|

ಮಂಗಳೂರು: ಬುಧವಾರ ಮೂಡುಶೆಡ್ಡೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಒಟ್ಟು ಐದು ಪೊಲೀಸ್ ದೂರು ದಾಖಲಾಗಿದೆ.

- Advertisement -


ಕಾವೂರು ಪೊಲೀಸ್ ಠಾಣೆಯಲ್ಲಿ ಐದು ಎಫ್ ಐಆರ್ ದಾಖಲಾಗಿದ್ದು, 29ಕ್ಕೂ ಹೆಚ್ಚು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ಕಡೆಯಿಂದ ಒಂದು, ಬಿಜೆಪಿಯಿಂದ ಒಂದು ಹಾಗೂ ಮೂರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.



Join Whatsapp