ಮಂಗಳೂರು: ನಿಯಮ ಮೀರಿದ ಧ್ವನಿವರ್ಧಕ ವಿರುದ್ಧ ಕ್ರಮಕ್ಕೆ ಮುಂದಾದ ಪೊಲೀಸ್ ಕಮಿಷನರ್

Prasthutha|

►ಆಝಾನ್ ಒಂದನ್ನೇ ಗುರಿಯಾಗಿಸಿ ಆದೇಶ ಹೊರಡಿಸಲಾಗಿಲ್ಲ ಎಂದ ಶಶಿಕುಮಾರ್

- Advertisement -

►ಕಮಿಷನರೇಟ್ ವ್ಯಾಪ್ತಿಯಲ್ಲಿ 1001 ಸಾರ್ವಜನಿಕ ಕೇಂದ್ರಗಳಲ್ಲಿ ಧ್ವನಿವರ್ಧಕ ಬಳಕೆ

ಮಂಗಳೂರು: ವಿಪರೀತ ಧ್ವನಿವರ್ಧಕ ಬಳಕೆಗೆ ಕಡಿವಾಣ ಹಾಕಲು ಸರ್ಕಾರ ನಿರ್ಧಾರ ಮಾಡಿದ್ದು ಅದರಂತೆ ಮಂಗಳೂರು ನಗರದ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಧ್ವನಿವರ್ಧಕ ಬಳಸುವ ಕೇಂದ್ರಗಳನ್ನು ಗುರುತಿಸಲಾಗಿದೆ ಎಂದು ಮಂಗಳೂರು ನಗರದ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಹೇಳಿದರು.

- Advertisement -

ಬುಧವಾರ ನಗರ ಪೊಲೀಸ್ ಕಮಿಷನರ್  ಕಚೇರಿಯಲ್ಲಿ ಮಾತನಾಡಿದ ಅವರು, ಶಬ್ದ ಮಾಲಿನ್ಯ ಆಕ್ಟ್ 1986ರಡಿಯಲ್ಲಿ ಡೆಸಿಬಲ್ ಶಬ್ದಕ್ಕಿಂತ ಹೆಚ್ಚಿನ ಶಬ್ದವನ್ನು ಉಪಯೋಗಿಸಬಾರದೆಂದು ನಿರ್ದೇಶಿಸಲಾಗಿದೆ. ಈ ನಿಯಮವನ್ನು ಉಲ್ಲಂಘಿಸಿದ್ದಲ್ಲಿ ಶಬ್ದ ಮಾಲಿನ್ಯ ಆಕ್ಟ್ 1986 ರಡಿಯಲ್ಲಿ ಮುಂದಿನ ದಿನಗಳಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ಈಗಾಗಲೇ ಕಮಿಷನರೇಟ್ ವ್ಯಾಪ್ತಿಯ 1001 ಸಾರ್ವಜನಿಕ ಕೇಂದ್ರಗಳಲ್ಲಿ ಧ್ವನಿವರ್ಧಕಗಳನ್ನು ಗುರುತಿಸಲಾಗಿದೆ. ಅದರಲ್ಲಿ 357 ದೇವಸ್ಥಾನ, 168 ಮಸೀದಿ, 95 ಚರ್ಚ್ ಹಾಗೂ 106  ಶಿಕ್ಷಣ ಸಂಸ್ಥೆಗಳು, 60 ಕೈಗಾರಿಕಾ ಸ್ಥಳಗಳು, 98 ಮನರಂಜನಾ, 68 ಮದುವೆ ಹಾಲ್ ಗಳು ಮತ್ತು ಕಾರ್ಯಕ್ರಮ ಸ್ಥಳಗಳು, 49 ಇತರ ಸಾರ್ವಜನಿಕ ಸ್ಥಳಗಳು ಸೇರಿದ್ದಾವೆ. ಇದರಲ್ಲಿ ಮಾಲ್ ಗಳು ಕೂಡಾ ಸೇರಿವೆ ಎಂದು ತಿಳಿಸಿದರು.

ಸದ್ಯ ನಡೆಯುತ್ತಿರುವ ಆಝಾನ್ ವಿಚಾರದ ಗೊಂದಲಕ್ಕೂ ಈ ಆದೇಶಕ್ಕೂ ಸಂಬಂಧವಿಲ್ಲ, ಆಝಾನ್ ವೊಂದನ್ನೇ ಗುರಿಯಾಗಿಸಿ ಈ ಆದೇಶ ಹೊರಡಿಸಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕೈಗಾರಿಕಾ ವಲಯ, ವಾಣಿಜ್ಯ, ವಸತಿ ಹಾಗೂ ಶಬ್ದರಹಿತ ವಲಯಗಳೆಂಬ ವಿಧಗಳಿದ್ದು, ಅಲ್ಲೆಲ್ಲ ಬಳಸುವ ಧ್ವನಿವರ್ಧಕವು ನಿಗದಿತ ಡೆಸಿಬಲ್ ಶಬ್ದವನ್ನು ಹೊಂದಿರಬೇಕಾಗುತ್ತದೆ. ಧ್ವನಿವರ್ಧಕ ಬಳಕೆಗೂ ರಾತ್ರಿ 10 ರಿಂದ 6 ಹಾಗೂ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ರ ವರೆಗಿನ ಹೀಗೆ ಡೆಸಿಬಲ್ ಮಿತಿಯಿದ್ದು ಅವುಗಳನ್ನು ಮೀರದಿರುವಂತೆ ಈಗಾಗಲೇ ಕಮೀಷನರೇಟ್ ವ್ಯಾಪ್ತಿಯ ಈ ಎಲ್ಲಾ ಕೇಂದ್ರಗಳಿಗೆ ನೋಟೀಸ್ ನೀಡಲಾಗುತ್ತಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಹಾಲಿ ನೀಡಲಾಗುತ್ತಿರುವ 1001 ಕೇಂದ್ರಗಳಲ್ಲಿ ಧ್ವನಿವರ್ಧಕ ಬಳಕೆಯನ್ನು ಗುರುತಿಸಲಾಗಿದ್ದು, ಆದರೆ ನಿಗದಿತ ಡೆಸಿಬಲ್ ನಡಿ ಶಬ್ದ ಹೊರಡಿಸಲಾಗುತ್ತಿದೆಯೇ ಎನ್ನುವುದರ ಬಗ್ಗೆ ಮುಂದಿನ ದಿನಗಳಲ್ಲಿ ಗುರುತಿಸಲಾಗುವುದು ಎಂದು ಹೇಳಿದರು.



Join Whatsapp